ರೈತ ಸಂಘದಿಂದ ಜೆಡಿಎಸ್ಗೆ
ಕ.ಪ್ರ.ವಾರ್ತೆ ಪಾಂಡವಪುರ ಮಾ25
ಶಾಸಕ ಸಿ.ಎಸ್. ಪುಟ್ಟರಾಜು ಅವರ ಸಮ್ಮುಖದಲ್ಲಿ ರೈತ ಸಂಘದ ತೊರೆದು ಹಲವಾರು ಕಾರ್ಯಕರ್ತರು ಜೆಡಿಎಸ್ಗೆ ಪಕ್ಷಕ್ಕೆ ಸೇರ್ಪೆಡೆಗೊಂಡರು.
ಪಟ್ಟಣದ ಹಾರೋಹಳ್ಳಿ ಗ್ರಾಮದ ಪಟ್ಟಣ ರೈತ ಸಂಘ ಅಧ್ಯಕ್ಷ ಹರೀಶ್, ಆಟೋ ಚಾಲಕರ ಸಂಘದ ಅಧ್ಯಕ್ಷ ಪ್ರದೀಪ್, ನಾಗರಾಜೇಗೌಡ, ಗೋಪಿ, ಕೃಷ್ಣೇಗೌಡ, ಮಧುಸೂದನ್ಮೂರ್ತಿ, ಮಹೇಶ್ ಇನ್ನು ಅನೇಕ ಯುವ ಮುಖಂಡರು ರೈತ ಸಂಘ ತೊರೆದು ಶಾಸಕರ ಅಭಿವೃದ್ಧಿ ಕಾರ್ಯ ಮೆಚ್ಚಿ ಜೆಡಿಎಸ್ ಸೇರ್ಪೆಡೆಗೊಂಡರು. ಎಲ್ಲರೂ ಪಟ್ಟಣದ ಹಾರೋಹಳ್ಳಿ ಗ್ರಾಮದ ಮುಖಂಡರಾಗಿದ್ದು, ಅಪ್ಪು ರವಿ ಮಾರ್ಗದರ್ಶನದಲ್ಲಿ ಜೆಡಿಎಸ್ ಸೇರಿದ್ದೇವೆ ಎಂದು ಮಹೇಶ್ ತಿಳಿಸಿದರು.
ಇದೇ ಸಂದರ್ಭ ಶಾಸಕ ಸಿ.ಎಸ್. ಪುಟ್ಟರಾಜು ರೈತ ಸಂಘಧಿಂದ ಬಂದ ಯುವ ಮುಖಂಡರನ್ನು ಜೆಡಿಎಸ್ ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿ, ವಿಧಾನಸಭಾ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗುತ್ತಿದೆ. ರಾಜಕೀಯದಲ್ಲಿ ಹೊಸ ಧ್ರುವೀಕರಣ ಕಾಣುತ್ತಿದ್ದೇವೆ. ಈಗಾಗಲೇ ಹಾರೋಹಳ್ಳಿ ಯುವ ಮುಖಂಡರು ರೈತ ಸಂಘವನ್ನು ತೊರೆದು ಜಾ.ದಳ ಮಾಡಿರುವ ಅಭಿವೃದ್ದಿ ಕೆಲಸವನ್ನು ಮೆಚ್ಚಿ ಹಾಗೆ ನನ್ನ ನಾಯಕತ್ವದ ಮೇಲೆ ನಂಬಿಕೆಯಿರಿಸಿ ಜೆ.ಡಿ.ಎಸ್. ಪಕ್ಷ ಸೇರ್ಪಡೆಗೊಂಡಿದ್ದಾರೆ. ಎಂದು ಸಂತಸ ವ್ಯಕ್ತಪಡಿಸಿದರು.
ದುದ್ದ ಹೋಬಳಿಯಲ್ಲಿ ಬೃಹತ್ ಸಮಾವೇಶ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ದುದ್ದ ಹೋಬಳಿಯಲ್ಲಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ ಹಾಗೂ ಹೊಸ ರಾಜಕೀಯ ಧ್ರುವೀಕರಣ ಚಿಂತನಾ ಸಮಾವೇಶ ಮುಂದಿನ ವಾರ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದದಲ್ಲಿ ಕಾಂಗ್ರೆಸ್, ಬಿಜೆಪಿ, ರೈತ ಸಂಘ ಕಾರ್ಯಕರ್ತರು ಮತ್ತು ಮುಖಂಡರು ಪಕ್ಷ ತೊರೆದ ಸಾವಿರಾರು ಕಾರ್ಯಕರ್ತರು ಜೆಡಿಎಸ್ ಸೇರ್ಪೆಡೆಯಾಗಲಿದ್ದಾರೆ. ಇದರಿಂದ ಪಕ್ಷದ ವರ್ಚಸ್ಸನ್ನು ಹೆಚ್ಚಿಸಿದೆ. ಹಾಗೆ ಅಂತ್ಯಂತ ಹೆಚ್ಚಿನ ಅಂತರದಿಂದ ಗೆಲ್ಲಿಸುವ ವಿಶ್ವಾಸವಿದೆ ಎಂದು ಶಾಸಕ ಸಿ.ಎಸ್. ಪುಟ್ಟಿರಾಜು ಹೇಳಿದರು.
ಇದೇ ಸಂದರ್ಭ ಜೆಡಿಎಸ್ ಹಾರೋಹಳ್ಳಿ ಗ್ರಾಮದ ಮುಖಂಡರಾದ ಚಂದ್ರಶೇಖರ್ ಕೃಷ್ಣ ಅಣ್ಣಯ್ಯ, ಉಮೇಶ್, ರವಿ, ರಮೇಶ್, ಕೆ.ಜೆ.ಕೃಷ್ಣ ಹೊಟೇಲ್ ನಾಗರಾಜ್, ಕೆ.ಕೆ.ಬೇರ್, ಪ.ಪಂ. ನೂತನ ಸದಸ್ಯ ಬಿ.ವೈ. ಬಾಬು, ನಾರಾಯಣಗೌಡ, ಅಪ್ಪು ರವಿ ಮತ್ತಿತರರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.