ಹಲವರು ಬಿಎಸ್ಪಿಗೆ ಸೇರ್ಪಡೆ
ಕನ್ನಡಪ್ರಭ ವಾರ್ತೆ ಮಳವಳ್ಳಿ ಮಾ.26
ಪಟ್ಟಣದಲ್ಲಿ ತಾಲೂಕು ಬಿಎಸ್ಪಿ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಹಲವಾರು ಪ್ರಮುಖರು ಬಿಎಸ್ಪಿಗೆ ಸೇರ್ಪಡೆಗೊಂಡರು.
ಪಕ್ಷದ ಜಿಲ್ಲಾ ಉಸ್ತುವಾರಿ ಸಂಯೋಜಕರಾದ ಎಸ್. ಸಿದ್ದಯ್ಯ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಈ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರಾದ ಬಸಪ್ಪಕಲ್ಲಾರೆಪುರ, ಜಿ ಸಿಕ್ರೇಶ್, ಪಂಚಾಕ್ಷರಿ, ಸಿ ಬಸವರಾಜು, ಚಿನ್ನಸ್ವಾಮಿ, ವಕೀಲರಾದ ಜಗದೀಶ್, ಸಿದ್ದಾರ್ಥನಗರದ ಶಂಕರ್, ಕಲ್ಕುಣಿ ಸತೀಷ್ ಮುಂತಾದವರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಸಹಕಾರಿ ಸಂಘಗಳ ನಿವೃತ್ತ ಲೆಕ್ಕಪರಿಶೋಧನಾ ಸಹಾಯಕ ನಿರ್ದೇಶಕರಾದ ಪುಟ್ಟಮಾದಯ್ಯ, ನಿವೃತ್ತ ಸಹಾಯಕ ಎಸ್ಸೈ ಕಾಳಯ್ಯ, ನಿವೃತ್ತ ಸಹಾಯಕ ಕೃಷಿ ಅಧಿಕಾರಿಗಳಾದ ಸಿ.ಕೆ ರುದ್ರಯ್ಯ, ನಿವೃತ್ತ ಮುಖ್ಯ ಶಿಕ್ಷಕರಾದ ಹೆಚ್ ಎಸ್. ಸಿದ್ದಯ್ಯ, ನಿವೃತ್ತ ಎಂಜಿನೀಯರ್ ಡಿ ಕಂಚಗಯ್ಯ, ನಿವೃತ್ತ ಅಧಿಕಾರಿಗಳಾದ ಕೆ ಸಿದ್ದರಾಜು, ರಾಜರತ್ನಂ, ಅಂಬೇಡ್ಕರ್ ಅಭಿಮಾನಿಗಳ ವೇದಿಕೆ ಅಧ್ಯಕ್ಷರಾದ ಎಂ ಸಿ ನಂದಕುಮಾರ್, ಸಿದ್ದಾರ್ಥ ನಗರದ ಯುವ ಮುಖಂಡರಾದ ಎಂ ಬಿ ಶಿವಯ್ಯ, ಕಲ್ಲಾರೆಪುರದ ಮಾಜಿ ಗ್ರಾಪಂ ಸದಸ್ಯರಾದ ಸುಬ್ಬಯ್ಯ, ಕೆ ಕೃಷ್ಣ, ಡಿ.ಹಲಸಹಳ್ಳಿಯ ಡಿ.ಎಸ್.ಲಿಂಗಣ್ಣಯ್ಯ, ಸವಿತ ಸಮಾಜದ ಮುಖಂಡರಾದ ಪಟ್ಟಣದ ಉಮೇಶ್, ಕಲ್ಕುಣಿ ಗ್ರಾಮದ ಜಯಲಕ್ಷ್ಮಮ್ಮ, ಪುಟ್ಟಸ್ವಾಮಿ ಮುಂತಾದವರು ಬಿಎಸ್ಪಿಗೆ ಸೇರ್ಪಡೆಗೊಂಡಿದ್ದಾರೆ ಎಂದು ಬಿಎಸ್ಪಿ ಮುಖಂಡರಾದ ಬಸಪ್ಪಕಲ್ಲಾರೆಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.