ಮಂಡ್ಯ

ಮಹಿಳೆಯರ ಮೇಲಿನ ಹಲ್ಲೆ: ಪ್ರತಿಭಟನೆ

ಪಾಂಡವಪುರ: ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ನಿವೃತ್ತ ಕಂದಾಯಾಧಿಕಾರಿ ಚಲುವೇಗೌಡ ಜಮೀನಿನ ರಸ್ತೆ ವಿಚಾರವಾಗಿ ರೈತ ಸಂಘದ ಕಾರ್ಯಕರ್ತರಾದ ಸಿ.ಎಸ್.ವಿಶ್ವನಾಥ್ ,ಕಾಂತರಾಜ್, ಕುಮಾರ, ಚಲುವೇಗೌಡ ಎಂಬುವರು  ಮಹಿಳೆಯರ ಮೇಲೆ ಮರಣಾಂತಿಕ ಹಲ್ಲೆ ನಡೆಸಿರುವುದನ್ನು ವಿರೋಧಿಸಿ ಚಿನಕುರಳಿ ಪೊಲೀಸ್ ಠಾಣೆ ಎದುರು ಸ್ವಸಹಾಯ ಸಂಘದ ಮಹಿಳೆಯರು ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ನಂತರ ಮಾತನಾಡಿದ ಪ್ರತಿಭಟನಕಾರರು, ಮಹಿಳೆಯರ ಮೇಲಿನ ಹಲ್ಲೆಗೆ ಸಂಬಂಧಪಟ್ಟಂತೆ ರೈತ ಸಂಘದ ಕಾರ್ಯಕರ್ತರಾದ ಸಿ.ಎಸ್. ವಿಶ್ವನಾಥ್, ಕಾಂತರಾಜ್, ಕುಮಾರ, ಚಲುವೇಗೌಡ ಇವರ ವಿರುದ್ಧ ದೂರು ದಾಖಲಿಸಿದರು. ಪಾಂಡವಪುರ ಪೊಲೀಸರು ಆರೋಪಿಗಳನ್ನು ಇದುವರೆವಿಗೂ ಬಂಧಿಸಿಲ್ಲ. ತಕ್ಷಣ ಅರೋಪಿಗಳನ್ನು ಬಂಧಿಸಿ ಕಾನೂನು  ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಪಾಂಡವಪುರ ಪೊಲೀಸ್ ಠಾಣೆಗೆ ಸಾವಿರಾರು ಮಹಿಳಾ ಸದಸ್ಯರೊಡನೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದೆಂದು ಎಚ್ಚರಿಸಿದರು.
ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಸಿ.ಎಸ್.ಗೋಪಾಲಗೌಡ, ಗ್ರಾ.ಪಂ.ಅಧ್ಯಕ್ಷ ಜಯರಾಮೇಗೌಡ, ವಿ.ಎಸ್.ಎಸ್ ಎನ್. ಬಿ. ಮಾಜಿ ಅಧ್ಯಕ್ಷ ಸಿದ್ದಲಿಂಗೇಗೌಡ ,ತಾ.ಪಂ.ಮಾಜಿ ಸದಸ್ಯ  ಸಿ.ಡಿ. ಗಂಗಾಧರ್ ಸೇರಿಂತೆ ಹಲವಾರು ಮಹಿಳೆಯರು  ಪ್ರತಿಭಟನೆ ನೇತೃತ್ವವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!