ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅಂತ್ಯೋದಯ ಕಾರ್ಡು ರದ್ದು; ಪ್ರತಿಭಟನೆ

Rashmi Kasaragodu
Updated On : 6 Aug 2013, 12:45 pm

ಕ.ಪ್ರ.ವಾರ್ತೆ   ಕೆ.ಆರ್. ನಗರ   ಆ. 5
ಆಹಾರ ಇಲಾಖೆ ವತಿಯಿಂದ ನೀಡಿರುವ ಬಿಪಿಎಲ್ ಮತ್ತು ಅಂತ್ಯೋದಯ ಯೋಜನೆಯ ಕಾರ್ಡುಗಳು  ರದ್ದುಗೊಂಡಿರುವುದನ್ನು ವಿರೋಧಿಸಿದ ತಾಲೂಕಿನ ಲಾಳನಹಳ್ಳಿ ಗ್ರಾಮದ ಫಲಾನುಭವಿಗಳು ಮತ್ತು ಸಾರ್ವಜನಿಕರು  ತಹಸೀಲ್ದಾರರಿಗೆ ಮತ್ತಿಗೆ ಹಾಕಿದರಲ್ಲದೆ ಮಿನಿ ವಿಧಾನಸೌಧದ ಮುಂದೆ ಪ್ರತಿಭಟಿಸಿದರು.
ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಮಹೇಶ್ ನೇತೃತ್ವದಲ್ಲಿ ತಹಸೀಲ್ದಾರ್ ಕಚೇರಿಗೆ ಬಂದು ರದ್ದುಗೊಂಡಿರುವ ತಮ್ಮ  ಕಾರ್ಡುಗಳನ್ನು ಪ್ರದರ್ಶಸಿದರು. ಅಧಿಕಾರಿಗಳ ತಪ್ಪಿನಿಂದ ನಮ್ಮ ಕಾರ್ಡುಗಳು ರದ್ದಾಗಿದ್ದು, ಕೂಡಲೇ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಂಡು ನಮಗೆ ಮತ್ತೆ ಪಡಿತರ ದೂರಕುವಂತೆ ಮಾಡಿ ಎಂದು ಆಗ್ರಹಿಸಿದರು. ಗ್ರಾಮದ  40ಕ್ಕೂ ಹೆಚ್ಚು ಅರ್ಹ ಫಲಾನುಭವಿಗಳ ಮತ್ತು ಬಡವರ ಕಾರ್ಡುಗಳು ರದ್ದಾಗಿವೆ. ನವೀಕರಣ ಸಂದರ್ಭದಲ್ಲಿ ಸೂಕ್ತ  ದಾಖಲಾತಿ ನೀಡಿದ್ದರೂ ಅಧಿಕಾರಿಗಳು ಇದ್ಯಾವುದನ್ನು ಪರಿಗಣಿಸದೆ ಬಡವರನ್ನು ಬೀದಿಪಾಲು ಮಾಡಿದ್ದಾರೆ ಎಂದು ಅವರು ಆರೋಪಿಸಿದಕು. ಪ್ರತಿಭಟನೆಯಲ್ಲಿ ಲಾಳನಹಳ್ಳಿ ಉಮೇಶ್, ಪ್ರಕಾಶ್, ಬಸಮ್ಮಣಿ, ಗಿರೀಶ್, ಪುಟ್ಟೀರಮ್ಮ, ಬಸಮ್ಮ ಭಾಗವಹಿಸಿದ್ದರು.   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement