ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಟ್ರಸ್ಟ್ ವಿವಾದ; ತಹಸೀಲ್ದಾರ್ ವಿರುದ್ಧ ದಂಪತಿ ಪ್ರತಿಭಟನೆ

Rashmi Kasaragodu
Updated On : 6 Aug 2013, 12:46 pm

ಕ.ಪ್ರ.ವಾರ್ತೆ   ನಂಜನಗೂಡು   ಆ. 5
ದೇವಾಲಯ ಟ್ರಸ್ಟ್ನ ಹಕ್ಕಿಗೆ ಒತ್ತಾಯಿಸಿ ಮತ್ತು ತಹಸೀಲ್ದಾರ್ ಧೋರಣೆ ಖಂಡಿಸಿ ತಾಲೂಕಿನ ಬಿದರಗೂಡು ಗ್ರಾಮದ ಕುಟುಂಬ ಒಂದರ ಸದಸ್ಯರು ಸೋಮವಾರ ತಹಸೀಲ್ದಾರ್ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.
ಮಹದೇಶ್ವರ ಸ್ವಾಮಿ ದೇಗುಲಕ್ಕೆ ಸೇರಿದ ಶಿವಣ್ಣ ಎಂಬುವರ ಪತ್ನಿ ರತ್ನಮ್ಮ ಧರಣಿ ನಡೆಸಿದವರು.
ದೇಗುಲ ಅಭಿವೃದ್ಧಿಗೆ ತನು-ಮನ, ಧನ ಸಮರ್ಪಿಸಿ ದೇವಾಲಯ ನಿರ್ಮಾಣ ಮಾಡಿ, ಜೀರ್ಣೋದ್ಧಾರಕ್ಕಾಗಿ ಕೋಟಿಗೊಬ್ಬ ಶರಣ  ಮಹದೇಶ್ವರ ಸ್ವಾಮಿ ಟ್ರಸ್ಟ್ ರಚಿಸಿಕೊಂಡು, ಭಕ್ತಾದಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ. ಗ್ರಾಮದ ಕೆಲವರು ನಮ್ಮ ಏಳಿಗೆ ಸಹಿಸದೆ ಶಿವರುದ್ರ ಎಂಬುವರ ನೇತೃತ್ವದಲ್ಲಿ  ಮಹದೇಶ್ವರ ಟ್ರಸ್ಟ್ ಹುಟ್ಟು ಹಾಕಿ ನಮ್ಮನ್ನು ಹೊರಹಾಕಿದ್ದಾರೆ. ಇದರ ಬಗ್ಗೆ ನ್ಯಾಯ ಕೇಳಲು ತಹಸೀಲ್ದಾರ್ ಬಳಿ ಹೋದಾಗ ಸೌಜನ್ಯದಿಂದ ವರ್ತಿಸಲಿಲ್ಲ, ಹಾಗಾಗಿ ಪ್ರತಿಭಟನೆ ನಡೆಸುತ್ತಿರುವುದಾಗಿ ದಂಪತಿ ತಿಳಿಸಿದರು.
ತಹಸೀಲ್ದಾರ್ ಅರುಳ್ ಕುಮಾರ್ ಮಾತನಾಡಿ, ಪ್ರಸ್ತುತ ದೇವಾಲಯದಲ್ಲಿ ಗ್ರಾಮದ ಮಹದೇಶ್ವರ ಟ್ರಸ್ಟ್ನವರು ಸೇವಾ ಕೈಂಕರ್ಯ ನಡೆಸುತ್ತಿದ್ದಾರೆ. ದೇಗುಲದ 5 ಎಕರೆ ನಿವೇಶನದ ದಾಖಲೆ ಮಹದೇಶ್ವರ ಸ್ವಾಮಿ ದೇವರ ಹೆಸರಿನಲ್ಲಿದೆ. ಈ ದೇವಾಲಯದ ವ್ಯಾಜ್ಯ ಬಗೆಹರಿಸಲು 2 ಬಾರಿ ಗ್ರಾಮಕ್ಕೆ ತೆರಳಿದ ಸಂದರ್ಭದಲ್ಲಿ ಶಿವಣ್ಣ ಹಾಜರಿರುವುದಿಲ್ಲ. ಟ್ರಸ್ಟ್ ನೀತಿ ನಿಯಮಾವಳಿ ದೇವಾಲಯದ ಆದಾಯ ದಾಖಲೆ ಪರಿಶೀಲಿಸಿ, ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರಿಸುವ ಸಾಧ್ಯತೆ ಕುರಿತಂತೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement