ಬಾಲ್ಯದಲ್ಲಿಯೇ ಕ್ರೀಡಾಸಕ್ತಿ ಬೆಳೆಸಿಕೊಳ್ಳಿ'
ಕ.ಪ್ರ.ವಾರ್ತೆ ಕಿತ್ತೂರು ಆ. 5
ಮಕ್ಕಳಿಗೆ ಪಾಠ, ಪ್ರವಚನದ ಜೊತೆಗೆ ಕ್ರೀಡೆಯಲ್ಲಿ ಆಸಕ್ತಿ ಬೆಳೆಯುವಂತೆ ಮಾಡಬೇಕಾದ ಜವಾಬ್ದಾರಿ ಶಿಕ್ಷಕರ ಜೊತೆಗೆ ಪೋಷಕರಿಗೂ ಇರಬೇಕು ಎಂದು ಉಪ ಪ್ರಾಂಶುಪಾಲ ಜಿ.ಜೆ. ಅಶೋಕ್ಕುಮಾರ್ ಕಿವಿಮಾತು ಹೇಳಿದರು. ಪಿರಿಯಾಪಟ್ಟಣ ತಾಲೂಕಿನ ಕಿತ್ತೂರು ಗ್ರಾಮದ ತಿಮ್ಮಾಜಮ್ಮ ಕರಿಯಪ್ಪ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ರಾವಂದೂರು ಹೋಬಳಿ ಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರತೆಗೆಯಲು ಇಂತಹ ಕ್ರೀಡಾಕೂಟ ಸಹಕಾರಿಯಾಗಲಿದೆ, ಯಾರಲ್ಲಿ ಯಾವ ಪ್ರತಿಭೆ ಇರುತ್ತದೋ, ಊಹಿಸಲು ಅಸಾಧ್ಯ ಎಂದು ತಿಳಿಸಿದರು.
ದೈಹಿಕ ಶಿಕ್ಷಣಾಧಿಕಾರಿ ನಾಗಸುಂದರ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಹದೇವಪ್ಪ, ಪುಟ್ಟತಾಯಮ್ಮ ಶಾಲೆಯ ಮುಖ್ಯ ಶಿಕ್ಷಕ ಕೆ.ಸಿ. ಪ್ರಕಾಶ್, ದೈಹಿಕ ಶಿಕ್ಷಕರಾದ ಹರೀಶ್, ಸುರೇಶ್, ಸುನೀತಾ, ಎಸ್ಡಿಎಂಸಿ ಅಧ್ಯಕ್ಷ ರಾಮೇಗೌಡ, ಉಪಾಧ್ಯಕ್ಷೆ ಮಂಜುಳಾ, ಸದಸ್ಯರಾದ ಕೆ.ಎಸ್. ದಿನೇಶ್, ಪಿ.ಎನ್. ನಟೇಶ್, ಕೆಂಪೇಗೌಡ ಇದ್ದರು.
ಕ್ರೀಡಾಕೂಟದಲ್ಲಿ ರಾವಂದೂರು, ಕಿತ್ತೂರು, ದೊಡ್ಡಬೇಲಾಳು, ಮಾಕೋಡು, ಹಂಡಿತವಳ್ಳಿ, ಹಿಟ್ನೆಹೆಬ್ಬಾಗಿಲು, ಮರದೂರು ಮೂಡಲಕೊಪ್ಪಲು ಪ್ರೌಢಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಿದ್ದರು.