ರಂಗಾಯಣ ರಾಜಕಾರಣಿಗಳ ಆಸ್ತಿಯಲ್ಲ'
ಮೈಸೂರು: ರಂಗಾಯಣ ರಾಜಕಾರಣಿಗಳ ಅಥವಾ ಪಕ್ಷದ ಆಸ್ತಿಯಲ್ಲ ಎಂದು ರಂಗಕರ್ಮಿ, ಗಾಯಕ ಎಚ್. ಜನಾರ್ದನ್ (ಜನ್ನಿ) ಅಭಿಪ್ರಾಯಪಟ್ಟಿದ್ದಾರೆ. ರಾಜ್ಯ ಮಟ್ಟದ ರಂಗಸಂಗೀತ ಸಮ್ಮೇಳನದ ವಿಚಾರ ಸಂಕಿರಣಲ್ಲಿ ಸೋಮವಾರ ಕನ್ನಡ ಹವ್ಯಾಸಿ ರಂಗಭೂಮಿ ಎಂಬ ವಿಷಯ ಕುರಿತು ಅವರು ಮಾತನಾಡಿ, ರಾಜ್ಯದ ಪ್ರಖ್ಯಾತ ರೆಪರ್ಟರಿ ಸಂಸ್ಥೆಯಾಗಿರುವ ರಂಗಾಯಣ ಇಂದು ಬೀದಿಗೆ ಬಿದ್ದಿದೆ. ಈ ಸಂಸ್ಥೆಯಲ್ಲಿದ್ದ ಕಲಾವಿದರನ್ನು ಶಿವಮೊಗ್ಗ ಹಾಗೂ ಧಾರಾವಾಡಗಳಿಗೆ ಕಳುಹಿಸಿದರೆ ಇಲ್ಲಿ ನಾಟಕ ಮಾಡುವವರು ಯಾರು ಎಂದು ಪ್ರಶ್ನಿಸಿದರು.