ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವಕೀಲರ ಕಲಾಪ ಬಹಿಷ್ಕಾರ ಮುಂದುವರಿಕೆ

Rashmi Kasaragodu
Updated On : 6 Aug 2013, 12:45 pm

ಕ.ಪ್ರ.ವಾರ್ತೆ   ಮೈಸೂರು   ಆ. 5
ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಶಿರಸ್ತೇದಾರರಾದ ಎ.ಎಂ. ನಾಗೇಂದ್ರಪ್ರಸಾದ್ ಅವರನ್ನು ಸ್ವಸ್ಥಾನಕ್ಕೆ ವಾಪಸ್ ಕಳುಹಿಸಲು ಆಗ್ರಹಿಸಿ ಮೈಸೂರು ವಕೀಲರ ಸಂಘದ ಪದಾಧಿಕಾರಿಗಳು ಸೋಮವಾರ ಸಹ ನ್ಯಾಯಾಲಯ ಕಲಾಪ ಬಹಿಷ್ಕರಿಸಿದರು.
ನಾಗೇಂದ್ರಪ್ರಸಾದ್ ಅವರನ್ನು ವಾಪಸ್ ಕಳುಹಿಸುವಂತೆ ಶನಿವಾರ ಸಹ ವಕೀಲರು ನ್ಯಾಯಾಲಯ ಕಲಾಪವನ್ನು ಬಹಿಷ್ಕರಿಸಿದ್ದರು.
ನಂಜನಗೂಡು ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನಾಗೇಂದ್ರಪ್ರಸಾದ್ ಅವರನ್ನು 2 ತಿಂಗಳ ಮಟ್ಟಿಗೆ ಇಲ್ಲಿಗೆ ನಿಯೋಜಿಸಲಾಗಿತ್ತು.
ಆದರೆ, 8 ತಿಂಗಳಾದರೂ ನಾಗೇಂದ್ರಪ್ರಸಾದ್ ಅವರನ್ನು ವಾಪಸ್ ಕಳುಹಿಸಿಲ್ಲ. ವಕೀಲರ ಸಂಘ ಹಾಗೂ ವಕೀಲರಿಗೆ ಕಿರಿಕಿರಿ ಮಾಡುತ್ತಿರುವ ನಾಗೇಂದ್ರ ಅವರನ್ನು ವಾಪಸ್ ಕಳುಹಿಸಬೇಕು.
ಅಲ್ಲಿಯವರೆಗೆ ವಕೀಲರು ಕಲಾಪಕ್ಕೆ ಹಾಜರಾಗುವುದಿಲ್ಲ ಎಂದು ವಕೀಲರ ಸಂಘದ ಅಧ್ಯಕ್ಷ ಸಿ. ಬಸವರಾಜು ತಿಳಿಸಿದ್ದಾರೆ.


ಆಧಾರ ರಹಿತ ಆರೋಪ: ಸ್ಪಷ್ಟನೆ
ನಿಯೋಜನೆ ಮೇರೆಗೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಶಿರಸ್ತೇದಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಎ.ಎಂ. ನಾಗೇಂದ್ರಪ್ರಸಾದ್ ಪ್ರಾಮಾಣಿಕರು. ಅವರ ಮೇಲಿನ ಆರೋಪಗಳು ಆಧಾರ ರಹಿತವಾಗಿದ್ದು, ಯಾವುದೇ ಪುರಾವೆ ಇಲ್ಲ ಎಂದು ನ್ಯಾಯಾಂಗ ಇಲಾಖೆ ನೌಕರರು ಸ್ಪಷ್ಟಪಡಿಸಿದ್ದಾರೆ.
ಸೂಕ್ತ ಪುರಾವೆ ನೀಡಿದರೆ ಅವರನ್ನು ಎಲ್ಲ ಬಗೆಯ ತನಿಖೆಗೆ ಒಳಪಡಿಸಲು ಸಿದ್ಧರಿದ್ದೇವೆ. ಯಾವುದೇ ನೌಕರರ ವ್ಯಕ್ತಿಗತ ಚಾರಿತ್ರ್ಯಕ್ಕೆ ಬೇರೆಯವರು ಮಸಿ ಬಳಿಯುವಂತಹ ಕಾರ್ಯಗಳನ್ನು ಸಂಘಟಿತರಾಗಿ ಎದುರಿಸುವುದಾಗಿ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement