ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅಂಗನವಾಡಿ ಎದುರು ಕೊಳಚೆ ನೀರು

Rashmi Kasaragodu
Updated On : 7 Aug 2013, 12:59 pm

ಕ.ಪ್ರ.ವಾರ್ತೆ   ಪಿರಿಯಾಪಟ್ಟಣ   ಆ. 6
ಅಂಗನವಾಡಿ ಕೇಂದ್ರದ ಪಕ್ಕದಲ್ಲಿ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳು ಚರಂಡಿ ನೀರನ್ನು ತುಳಿದೇ ಕೇಂದ್ರಕ್ಕೆ ಪ್ರವೇಶಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ತಾಲೂಕಿನ ಬೂದಿತಿಟ್ಟು ಗ್ರಾಮದ ಅಂಗನವಾಡಿ ಕೇಂದ್ರವು ರಸ್ತೆ ಪಕ್ಕದಲ್ಲಿದ್ದು, ರಸ್ತೆಗೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಚರಂಡಿಯಲ್ಲಿ ಹರಿಯಬೇಕಿದ್ದ ನೀರು ಅಂಗನವಾಡಿ ಕೇಂದ್ರದ ಮುಂದೆ ಶೇಖರಣೆಯಾಗಿದ್ದು, ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ತೆರಳಬೇಕಾದರೆ ಗಲೀಜು ನೀರಿನ್ನು ತುಳಿದೆ ಕೇಂದ್ರಕ್ಕೆ ಪ್ರವೇಶಿಸಬೇಕಿದೆ.
ಆಟವಾಡಲು ಜಾಗವಿಲ್ಲ: ಕೇಂದ್ರದ ಮುಂಭಾಗ ಧ್ವಜ ಸ್ತಂಭವಿದ್ದು, ಅದರ ಮೆಟ್ಟಿಲುಗಳೂ ಸಹ ಗಲೀಜು ನೀರಿನಿಂದ ಆವೃತ್ತವಾಗಿ ಕೆಲವು ಮೆಟ್ಟಿಲುಗಳು ಕುಸಿದಿದೆ. ಕೇಂದ್ರದ ಮುಂದೆ ಮಕ್ಕಳು ಆಟವಾಡಲು ಸಾಧ್ಯವಾಗುವಷ್ಟು ಜಾಗವಿದ್ದರೂ ಸಹಾ ಚರಂಡಿ ನೀರು ತುಂಬಿಕೊಂಡಿರುವುದರಿಂದ ಮಕ್ಕಳ ಆಟಕ್ಕೂ ಅಡಚಣೆಯಾಗಿದೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸ್ವಚ್ಛತಾ ಕೆಲಸ ಹಾಗೂ ಧ್ವಜಸ್ತಂಭದ ದುರಸ್ತಿ ಮಾಡಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement