ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮನೆ ತೆರಿಗೆ ನಿಗದಿಗೆ ಲಂಚ: 'ಲೋಕಾ' ಬಲೆಗೆ ಎಂಡಿಎ ಸಿಬ್ಬಂದಿ

Rashmi Kasaragodu
Updated On : 7 Aug 2013, 1:01 am

ಮೈಸೂರು: ಹೊಸದಾಗಿ ನಿರ್ಮಿಸಲಾಗಿರುವ ಮನೆಗೆ ತೆರಿಗೆ ನಿಗದಿಗಾಗಿ ಲಂಚ ಪಡೆಯುತ್ತಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಎಂಡಿಎ) ಪ್ರಥಮ ದರ್ಜೆ ಸಹಾಯಕ ನಾಗರಾಜು ಎಂಬವರು ಲೋಕಾಯುಕ್ತ ಪೊಲೀಸರ ಬಲೆಗೆ ಮಂಗಳವಾರ ಮಧ್ಯಾಹ್ನ ಸಿಕ್ಕಿಬಿದ್ದಿದ್ದಾರೆ.
ಎಂ.ಕೆ. ಶ್ರೀಕಾಂತ್ ಭಾರದ್ವಾಜ್ ಚೆನ್ನೈನಲ್ಲಿ ವಾಸವಾಗಿದ್ದು, ಅವರು ಮೈಸೂರಿನ ವಿಜಯನಗರ 4ನೇ ಹಂತದಲ್ಲಿ ಮನೆ ನಿರ್ಮಿಸಿದ್ದಾರೆ. ನಿರ್ಮಾಣ ಪೂರ್ಣಗೊಳಿಸಿದ ಬಗ್ಗೆ ದಾಖಲೆಯನ್ನು ಎಂಡಿಎಯಿಂದ ಪಡೆದುಕೊಂಡಿದ್ದು, ಈ ಮನೆಗೆ ವಾರ್ಷಿಕ ಕಂದಾಯ ನಿಗದಿಪಡಿಸಲು ಜು.16 ರಂದು ಮನವಿ ಸಲ್ಲಿಸಿದ್ದರು.
ಈ ಮನವಿಯು ಎಂಡಿಎ ವಲಯ-3ರ ಕಡತ ನಿರ್ವಾಹಕ ನಾಗರಾಜು ಅವರ ಬಳಿ ಬಾಕಿ ಉಳಿದಿದೆ. ಶ್ರೀಕಾಂತ್ ಭಾರದ್ವಾಜ್ ಅವರ ಪರವಾಗಿ ಸಂಬಂಧಿಕರು ಹಾಗೂ ಪೊಲೀಸ್ ಸಹಾಯವಾಣಿ ಪೇದೆ ಕೆ. ಮಹದೇವಸ್ವಾಮಿ ಅವರು ನಾಗರಾಜು ಅವರನ್ನು ಭೇಟಿಯಾಗಿ ವಿಚಾರಿಸಿದಾಗ ಮನೆಗೆ ಕಂದಾಯ ನಿಗದಿಪಡಿಸಿ ದಾಖಲೆ ತಯಾರಿಸಲು ರು. 4,000  ಲಂಚ ಕೇಳಿದ್ದಾರೆ. ಬಳಿಕ ರು.3500  ಲಂಚ ಪಡೆಯಲು ಒಪ್ಪಿದ್ದರು. ಅದರಂತೆ ಕೆ. ಮಹದೇವಸ್ವಾಮಿ ಜೆಎಲ್ಬಿ ರಸ್ತೆಯಲ್ಲಿರು ಎಂಡಿಎ ಕಂದಾಯ ವಲಯ ಕಚೇರಿ-3ಕ್ಕೆ ತೆರಳಿ ಅಲ್ಲಿದ್ದ ಕಡತ ನಿರ್ವಾಹಕರಾದ ಎಫ್ಡಿಎ ನಾಗರಾಜು (53) ಅವರಿಗೆ ರು.3500  ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಆರೋಪಿ ನಾಗರಾಜುನನ್ನು ಬಂಧಿಸಿದ್ದಾರೆ. ಲಂಚವಾಗಿ ಪಡೆದ ರು.3500 ವಶಪಡಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ. ಮೈಸೂರು ಲೋಕಾಯುಕ್ತ ಎಸ್ಪಿ ಎಸ್.ಎಂ. ಜಗದೀಶ್ಪ್ರಸಾದ್ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ಗಳಾದ  ಗೋಪಾಲಕೃಷ್ಣ, ಕೆ.ಟಿ. ಮ್ಯಾಥ್ಯೂಸ್ ಥಾಮಸ್ ಮತ್ತು ಸಿಬ್ಬಂದಿ ನಾರಾಯಣ್, ಪಾಂಡುರಂಗ, ನಿರಂಜನ್, ರಮೇಶ, ವೀರಭದ್ರಸ್ವಾಮಿ, ಶಿವಶಂಕರ್, ಅನ್ನಪೂರ್ಣ, ದಿವ್ಯಾ, ದಾಕ್ಷಾಯಿಣಿ, ವಾಹನ ಚಾಲಕರಾದ ಪ್ರಶಾಂತ್ಕುಮಾರ್, ನರಸೇಗೌಡ ಈ ದಾಳಿ ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement