ಸಾರಿಗೆ ಬಸ್ ಡಿಕ್ಕಿ; ಬೈಕ್ ಸವಾರ ಸಾವು
ಕ.ಪ್ರ.ವಾರ್ತೆ ಮೈಸೂರು ಆ. 6
ಕೆಎಸ್ಆರ್ಟಿಸಿ ನಗರ ಸಾರಿಗೆ ಬಸ್ ಡಿಕ್ಕಿಯೊಡೆದ ಪರಿಣಾಮ, ದ್ವಿಚಕ್ರ ವಾಹನ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಅಗ್ರಹಾರ ವೃತ್ತದ ಬಳಿ ಸೋಮವಾರ ರಾತ್ರಿ ನಡೆದಿದೆ.
ಯರಗನಹಳ್ಳಿ ವರ್ತುಲ ರಸ್ತೆ ಬಳಿಯ ನಿವಾಸಿ ಈರೇಗೌಡ ಎಂಬವರ ಪುತ್ರ ಹನುಮಂತ (29) ಮೃತಪಟ್ಟವರು. ಇವರು ಧಾರವಾಡ ಮೂಲದವರಾಗಿದ್ದು, ಕಳೆದ ಹಲವಾರು ವರ್ಷಗಳಿಂದ ಮೈಸೂರಿನಲ್ಲಿ ವಾಸವಾಗಿದ್ದರು. ಹನುಮಂತ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದರು.
ಕೆ.ಜಿ. ಕೊಪ್ಪಲಿನಲ್ಲಿ ಕೆಲಸ ಮುಗಿಸಿ ರಾತ್ರಿ ಮನೆಗೆ ದ್ವಿ ಚಕ್ರವಾಹನದಲ್ಲಿ ಹೋಗುತ್ತಿದ್ದರು.
ಅಗ್ರಹಾರ ವೃತ್ತದ ಬಳಿಯ ಜೆಎಸ್ಎಸ್ ಆಸ್ಪತ್ರೆ ಜಂಕ್ಷನ್ನಲ್ಲಿ ಸಾರಿಗೆ ಬಸ್ ಹಿಂದಿಕ್ಕಲು ಪ್ರಯತ್ನಿಸಿದಾಗ ಬಸ್ ಡಿಕ್ಕಿಯಾಗಿದೆ. ಈ ವೇಳೆ ದ್ವಿ ಚಕ್ರವಾಹನದಿಂದ ಕೆಳಗೆ ಬಿದ್ದ ಹನುಮಂತ ತಲೆ ಮೇಲೆ ಬಸ್ಸಿನ ಹಿಂಬದಿಯ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಸಂಬಂಧ ಕೆ.ಆರ್. ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಸಂಚಾರ ಇನ್ಸ್ಪೆಕ್ಟರ್ಗಳಾದ ಶಾಂತಮಲ್ಲಪ್ಪ, ಮಹೇಶ್ಕುಮಾರ್, ಎಸ್ಐ ಸತೀಶ್, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.