ಚೆನ್ನೈಗೆ ತೆರಳಿದ ಮುಂಬೈ ಎಕ್ಸ್ಪ್ರೆಸ್ ರ್ಯಾಲಿ
ಮುಂಬೈ ಎಕ್ಸ್ಪ್ರೆಸ್ ಆಟೋರಿಕ್ಷಾ ಅಡ್ವೆಂಚರ್ ರ್ಯಾಲಿಯು ಬುಧವಾರ ಮೈಸೂರಿಗೆ ಆಗಮಿಸಿತು. 2 ಸಾವಿರ ಕಿ.ಮೀ. ದೂರ ಕ್ರಮಿಸುವ ಈ ರ್ಯಾಲಿಯು ಮುಂಬೈನಿಂದ ಮೈಸೂರಿಗೆ ಕಳೆದ ರಾತ್ರಿ ಆಗಮಿಸಿತ್ತು. ಮೈಸೂರಿನಿಂದ ಹೊರಟ ಈ ರ್ಯಾಲಿಯು ಆ.9ರಂದು ಚೆನ್ನೈ ತಲುಪಲಿದೆ. ಈ ರ್ಯಾಲಿಗೆ ನಗರದಲ್ಲಿ ಲೇಡಿಸ್ ಸರ್ಕಲ್ ಇಂಡಿಯಾದ ರಾಷ್ಟ್ರೀಯ ಸಂಪಾದಕಿ ನಮ್ರತಾ ಶೆಣೈ ಅವರು ಕುಕ್ಕರಹಳ್ಳಿ ಶಾಲೆ ಬಳಿ ಚಾಲನೆ ನೀಡಿದರು. ರೌಂಡ್ ಟೇಬಲ್ ದತ್ತು ತೆಗೆದುಕೊಂಡ ಕುಕ್ಕರಹಳ್ಳಿ ಶಾಲೆಯ ಮಕ್ಕಳು ರ್ಯಾಲಿಯನ್ನು ಆತ್ಮೀಯವಾಗಿ ಬರಮಾಡಿಕೊಂಡರು. ರ್ಯಾಲಿಯಲ್ಲಿ ಭಾಗವಹಿಸಿದ್ದವರು ಶಾಲಾ ಮಕ್ಕಳಿಗೆ ಸಿಹಿ ಹಂಚಿದರು. ನ್ಯೂಜಿಲೆಂಡ್, ರಷ್ಯಾ, ಯುರೋಪ, ಜರ್ಮನಿ ಮುಂತಾದ ದೇಶಗಳ ಪ್ರತಿನಿಧಿಗಳನ್ನು ಒಳಗೊಂಡ ಆರು ರಿಕ್ಷಾದ ಮೂಲಕ ಈ ರ್ಯಾಲಿ ಆರಂಭಿಸಲಾಗಿದೆ ಎಂದು ಮದ್ರಾಸ್ ಮಿಡ್ಟೌನ್ ರೌಂಡ್ ಟೇಬಲ್ನ ವಕ್ತಾರ ಸಂದೀಪ್ ಮಾಲ್ ತಿಳಿಸಿದ್ದಾರೆ. ಈ ವೇಳೆ ರೌಂಡ್ ಟೇಬಲ್ ರಾಷ್ಟ್ರೀಯ ಅಧ್ಯಕ್ಷ ಹರೀಶ್ ಶೆಣೈ, ಉಪಾಧ್ಯಕ್ಷ ದೀಪಕ್ ಮೆಂಡ ಇದ್ದರು.