ಜೆಆರ್ಎಫ್, ಎನ್ಇಟಿಗೆ ಅರ್ಜಿ
ಮೈಸೂರು: ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ಮತ್ತು ಕೌನ್ಸಿಲ್ ಆಫ್ ಸೈಂಟಿಫಿಕ್ ಮತ್ತು ಇಂಡಸ್ಟ್ರಿಯಲ್ ರಿಸರ್ಚ್ ಸಂಯುಕ್ತವಾಗಿ ಕಿರಿಯ ಸಂಶೋಧನಾ ಶಿಷ್ಯವೇತನ (ಜೆಆರ್ಎಫ್) ಹಾಗೂ ಉಪನ್ಯಾಸಕರ ಹುದ್ದೆಗಳ ಅರ್ಹತೆಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ(ಎನ್ಇಟಿ) ನಡೆಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸೈನ್ಸ್ ವಿಷಯಗಳಲ್ಲಿ ಸ್ನಾತಕೋತ್ತರ, ಅಥವಾ ಎಂಜಿನಿಯರಿಂಗ್, ಬಿ.ಫಾರ್ಮ, ಎಂಬಿಬಿಎಸ್ ಪದವಿಗಳಲ್ಲಿ ಶೇ.55 (ಎಸ್ಸಿ, ಎಸ್ಟಿ ಶೇ.50ರಷ್ಟು) ಅಂಕ ಗಳಿಸಿ ಉತ್ತೀರ್ಣರಾಗಿರಬೇಕು. 28 ವರ್ಷದೊಳಗಿರಬೇಕು.(ಎಸ್ಸಿ, ಎಸ್ಟಿ, ಒಬಿಸಿ, ಪಿಎಚ್ ವಿದ್ಯಾರ್ಥಿಗಳಿಗೆ 5 ವರ್ಷಗಳ ಸಡಿಲಿಕೆಯುಂಟು). ಪರೀಕ್ಷಾ ಶುಲ್ಕ ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 100, ಒಬಿಸಿ(ಕೇಂದ್ರ) ಅಭ್ಯರ್ಥಿಗಳಿಗೆ 200, ಇತರರಿಗೆ 400. ವೆಬ್ಸೈಟ್ ಢಿಢಿಢಿ.್ಛಝ್ಝ್ಠ್ಠಜ್ಜ.್ಠಜಡ.್ಝಟಿ ನಲ್ಲಿ ಅರ್ಜಿ ಪಡೆದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆ.22 ಕೊನೆ ದಿನ. ಎಲ್ಲ ದಾಖಲಾತಿಗಳೊಂದಿಗೆ ಮುದ್ರಿತ ಅರ್ಜಿ ಸಲ್ಲಿಸಲು ಆ.27 ಕಡೆ ದಿನ. ವಿವರಗಳಿಗೆ ಉಪ ಮುಖ್ಯಸ್ಥರು, ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಗ್ರಂಥಾಲಯ ಕಟ್ಟಡ, ಮಾನಸಗಂಗೋತ್ರಿ, ಮೈಸೂರು ವಿವಿ, ಮೈಸೂರು ಅಥವಾ ದೂ. 2516844, 8892019297 ಸಂಪರ್ಕಿಸಬಹುದು.
ಕೆಲಸ ನೀಡಲು ವಿಳಂಬ: ದಂಡ
ಮೈಸೂರು: ಕೆಲಸ ನೀಡಲು ವಿಳಂಬ ಮಾಡಿರುವ ಅರಣ್ಯ ಇಲಾಖೆಯು ತನಗೆ 30 ಲಕ್ಷ ನಷ್ಟ ಭರಿಸಿಕೊಡಬೇಕು ಎಂದು ಅರಣ್ಯ ಇಲಾಖೆ ನೌಕರರಾದ ಪಾರ್ವತಮ್ಮ ಆಗ್ರಹಿಸಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ ನಿವಾಸಿ ಪಾರ್ವತಮ್ಮ ಅರಣ್ಯ ಇಲಾಖೆ ಹುಣಸೂರು ವಿಭಾಗದಲ್ಲಿ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಪತಿ ಜಗದೀಶ್ ಎಂಬವರ 1997 ರಲ್ಲಿ ಕರ್ತವ್ಯದಲ್ಲಿದ್ದಾಗಲೇ ನಿಧನರಾಗಿದ್ದರು. ಪತಿಯ ಕೆಲಸವನ್ನು ತನಗೆ ಅನುಕಂಪದ ಆಧಾರದ ಮೇಲೆ ನೀಡುವಂತೆ ಪಾರ್ವತಮ್ಮ ಅರ್ಜಿ ಸಲ್ಲಿಸಿದ್ದರು. ಆದರೆ, ಅರಣ್ಯ ಇಲಾಖೆಯು 2012ನೇ ಸಾಲಿನಲ್ಲಿ ಪಾರ್ವತಮ್ಮಗೆ ಕೆಲಸ ನೀಡಿದೆ. 15 ವರ್ಷಗಳ ಕೆಲಸ ನೀಡದೆ ಸತಾಯಿಸಿದ್ದರಿಂದ ತನಗೆ 30 ಲಕ್ಷ ನಷ್ಟವಾಗಿದೆ. ಇದನ್ನು ಅರಣ್ಯ ಇಲಾಖೆಯು ಭರಿಸಿಕೊಡಬೇಕು ಎಂದು ಪಾರ್ವತಮ್ಮ ಅವರು ಮೈಸೂರಿನ ಅಶೋಕಪುರಂ ಅರಣ್ಯ ಭವನದಲ್ಲಿರುವ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ