ನಾಳೆ ಕ್ವಿಟ್ ಇಂಡಿಯ ಚಳವಳಿ ನೆನಪು
ಮೈಸೂರು: ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಮೈಸೂರು ನಗರ ಮತ್ತು ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಸಂಘದ ವತಿಯಿಂದ ಆ.9ರ ಬೆಳಗ್ಗೆ 10ಕ್ಕೆ ನಾರಾಯಣಶಾಸ್ತ್ರಿ ರಸ್ತೆಯಲ್ಲಿನ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಕ್ವಿಟ್ ಇಂಡಿಯ ಚಳವಳಿ ದಿನಾಚರಣೆ ಆಚರಿಸಲಾಗುವುದು. 18ರಂದು ಸಂಘದ ವಾರ್ಷಿಕ ಮಹಾಸಭೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷರು, ಮೊ. 9342277333 ಸಂಪರ್ಕಿಸಬಹುದು.
ನಾಳೆ ಮಕ್ಕಳ ನಾಟಕೋತ್ಸವ
ನಟನ ರಂಗಸಂಸ್ಥೆಯಿಂದ ಆ.9ರಿಂದ ಕನ್ನಡದ ಮೂರು ಮಕ್ಕಳ ನಾಟಕಗಳು ದಟ್ಟಗಳ್ಳಿಯ ಕನಕದಾಸ ನಗರದಲ್ಲಿರುವ ಸುಪ್ರೀಮ್ ಪಬ್ಲಿಕ್ ಶಾಲೆಯಲ್ಲಿ ಪ್ರತಿದಿನ ಸಂಜೆ 7ಕ್ಕೆ ಪ್ರದರ್ಶನವಾಗಲಿದೆ. ಆ.9ರಂದು ಅಳಿಲು ರಾಮಾಯಣ, ಆ.10ರಂದು ಸತ್ರು ಅಂದ್ರೆ ಸತ್ರಾ..., ಆ.11ರಂದು ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಚಂದ್ರಶೇಖರ ಕಂಬಾರರ ಅಲೀಬಾಬಾ ನಾಟಕ ಪ್ರದರ್ಶನವಾಗಲಿದೆ. ಮಂಡ್ಯ ರಮೇಶ್ ನಿರ್ದೇಶಿಸುವರು. ಮಾಹಿತಿಗಾಗಿ ಮೊ. 9480468327 ಸಂಪರ್ಕಿಸಬಹುದು.