ನಿಮ್ಮ ಸುರಕ್ಷತೆಗೆ ಹೆಲ್ಮೆಟ್ ಧರಿಸಿ: ಮಹೇಶ್ಕುಮಾರ್
ಕ.ಪ್ರ.ವಾರ್ತೆ ಮೈಸೂರು ಆ. 7
ದ್ವಿಚಕ್ರ ವಾಹನ ಸವಾರರು ತಮ್ಮ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸಬೇಕೇ ಹೊರತು ಪೊಲೀಸರಿಂದ ತಪ್ಪಿಸಿಕೊಳ್ಳಲು ಅಲ್ಲ ಎಂದು ಕೆ.ಆರ್. ಸಂಚಾರ ಠಾಣೆ ಇನ್ಸ್ಪೆಕ್ಟರ್ ಮಹೇಶ್ಕುಮಾರ್ ಹೇಳಿದರು.
ಶಾರದಾ ವಿಲಾಸ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಆಯೋಜಿಸಲಾಗಿದ್ದ ರಸ್ತೆ ಸುರಕ್ಷಾ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಹೆಲ್ಮೆಟ್ ಧರಿಸಿ ದ್ವಿಚಕ್ರವಾಹನ ಓಡಿಸುವುದರಿಂದ ಹಾಗೂ ಎಲ್ಲ ಸಂಚಾರ ನಿಮಯ ಪಾಲಿಸುವುದರಿಂದ ಚಾಲಕರ ಸುರಕ್ಷತೆಗೆ ರಹದಾರಿ. ಡಿಎಲ್ ಮತ್ತು ವಿಮೆ ಇಲ್ಲದೆ ವಾಹನಗಳನ್ನು ಚಲಾಯಿಸುವುದು ಆಪತ್ತನ್ನು ಆಹ್ವಾನಿಸಿದಂತೆ. ಹೀಗಾಗಿ ಸರಿಯಾದ ದಾಖಲೆಗಳನ್ನು ಇರಿಸಿಕೊಂಡು ವಾಹನ ಚಲಾಯಿಸಬೇಕು ಎಂದರು.
ಇದೇ ವೇಳೆ ರಸ್ತೆ ಸುರಕ್ಷತೆ ಕುರಿತ ಕಿರುಚಿತ್ರಗಳನ್ನು ಪ್ರದರ್ಶಿಸಲಾಯಿತು. ಕಾಲೇಜು ಪ್ರಾಂಶುಪಾಲ ಡಾ.ಎ.ಆರ್. ನಾಗಭೂಷಣ ಅಧ್ಯಕ್ಷತೆ ವಹಿಸಿದ್ದರು. ಕೆ.ಆರ್. ಸಂಚಾರ ಠಾಣೆ ಎಸ್ಐ ಸತೀಶ್, ಎನ್ಎಸ್ಎಸ್ ಅಧಿಕಾರಿ ಎಸ್. ಕಾಂಚನ ಇದ್ದರು. ಶ್ರುತಿ ಮತ್ತು ಯಶಸ್ವಿನಿ ನಿರೂಪಿಸಿದರು.