ಮೇಲ್ಮನೆ ಚುನಾವಣೆ: ಮಂಜುನಾಥ್ ಪ್ರಸಾದ್ ವೀಕ್ಷಕರು
ಕ.ಪ್ರ.ವಾರ್ತೆ ಮೈಸೂರು ಆ. 7
ಸ್ಥಳೀಯ ಸಂಸ್ಥೆಗಳ ಉಪ ಚುನಾವಣಾ ವೀಕ್ಷಕರಾದ ಎನ್. ಮಂಜುನಾಥ್ ಪ್ರಸಾದ್ ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ, ಸಹಾಯ ಚುನಾವಣಾಧಿಕಾರಿಗಳಾದ ಹೆಚ್ಚುವರಿ ಜಿಲ್ಲಾಧಿಕಾರಿಗಳು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಎಲ್ಲ ತಾಲೂಕು ತಹಸೀಲ್ದಾರ್ಗಳ ಸಭೆ ನಡೆಸಿದರು. ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗವು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಎನ್. ಮಂಜುನಾಥ್ ಪ್ರಸಾದ್ ಅವರನ್ನು ಚುನಾವಣಾ ವೀಕ್ಷಕರನ್ನಾಗಿ ನೇಮಿಸಿದ್ದು, ಇವರು ನಡೆಸಿದ ಸಭೆಯಲ್ಲಿ ಚುನಾವಣಾ ವೀಕ್ಷಕರು ಎಲ್ಲ ಅಧಿಕಾರಿಗಳಿಗೆ ಚುನಾವಣೆಯನ್ನು ಯಶಸ್ವಿಯಾಗಿ ನಡೆಸುವ ಬಗ್ಗೆ ಸೂಕ್ತ ನಿರ್ದೇಶನ ನೀಡಿದರು. ಅಭ್ಯರ್ಥಿಗಳು, ಮತದಾರರು, ಇತರರು ವೀಕ್ಷಕರನ್ನು ಸಂಪರ್ಕಿಸಲು ಮೊ. 9480170472 ಕರೆ ಮಾಡಬಹುದು.