ಶಿಕ್ಷಕರ ವಸತಿಗೃಹದಲ್ಲಿ ಕಳ್ಳತನ
ಹುಣಸೂರು: ತಾಲೂಕಿನ ಗುರುಪುರದ ಟಿಬೆಟಿಯನ್ ಕೇಂದ್ರೀಯ ವಿದ್ಯಾ ಶಾಲೆಯ ಶಿಕ್ಷಕರ ಹಾಗೂ ಸಿಬ್ಬಂದಿ ವಸತಿ ಗೃಹದಲ್ಲಿ ಮಂಗಳವಾರ ರಾತ್ರಿ ಕಳ್ಳತನ ನಡೆದಿದೆ.
ವಸತಿ ಗೃಹದಲ್ಲಿದ್ದ ಶಾಲೆಯ ಶಿಕ್ಷಕಿ ಭಾರತಿಯವರ ಕೊಠಡಿಯ ಸರಳು ಮುರಿದು ಕಡ್ಡಿಯಿಂದ ವ್ಯಾನಿಟಿ ಬ್ಯಾಗ್ನ್ನು ಅಪಹರಿಸಿದ್ದಾರೆ.
ಬ್ಯಾಗ್ನಲ್ಲಿ ರಿಸ್ಟ್ ವಾಚ್, ಮೊಬೈಲ್, 500 ಹಣವಿತ್ತು, ಅಲ್ಲದೆ ವಾಚ್ಮನ್ ಮಹದೇವ್ ಅವರಿಗೆ ಸೇರಿದ ಗ್ಯಾಸ್ ಸಿಲಿಂಡರ್ಅನ್ನು ಹೊತ್ತೊಯ್ದಿದ್ದಾರೆ.
ಶಬ್ದದಿಂದ ಎಚ್ಚೆತ್ತುಕೊಂಡ ವಾಚ್ಮನ್ ಮಹದೇವ್ ಕೂಗಿಕೊಂಡಾಗ ಬೈಕ್ನಲ್ಲಿ ಬಂದಿದ್ದ ಕಳ್ಳರು ಪರಾರಿಯಾಗಿದ್ದಾರೆ.
ಈ ಸಂಬಂಧ ಶಾಲೆಯ ಪ್ರಾಂಶುಪಾಲರಾದ ಮಾಲತಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಅಪರಾಧ ವಿಭಾಗದ ಎಸ್ಐ ಲಿಂಗರಾಜು ಸ್ಥಳಕ್ಕೆ ಭೇಟಿ ನೀಡಿದ್ದರು.