ಸುತ್ತೂರು ಮಠದಲ್ಲಿ ಶ್ರಾವಣ ಪೂಜಾನುಷ್ಠಾನ
ಕ.ಪ್ರ.ವಾರ್ತೆ ಮೈಸೂರು ಆ. 7
ನಗರದ ಸುತ್ತೂರು ಶಾಖಾ ಮಠದಲ್ಲಿ ಬುಧವಾರ ಶ್ರಾವಣ ಮಾಸದ ಪೂಜಾನುಷ್ಠಾನ ಅಂಗವಾಗಿ ಪ್ರವಚನ ಕಾರ್ಯಕ್ರಮ ನಡೆಯಿತು.
ಮಹಾರಾಜ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಎಸ್. ನಂಜುಂಡಯ್ಯ ಅವರು ಉಪನ್ಯಾಸ ನೀಡಿ, ಶ್ರಾವಣ ಮಾಸವು ಹಬ್ಬಗಳ ಆರಂಭದ ತಿಂಗಳಾಗಿದೆ. ಈ ತಿಂಗಳಿನಲ್ಲಿ ಅನೇಕ ಉಪಕರ್ಮಿಗಳು, ಜನ್ಮಾಷ್ಠಮಿಗಳು ಬರುತ್ತದೆ. ಇದು ಶ್ರಾವಣ ಪ್ರಧಾನ ತಿಂಗಳಾಗಿದ್ದು, ಸೋಮವಾರ ಮತ್ತು ಶನಿವಾರಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದರು.
ಬಳಿಕ ಟಿ. ನರಸೀಪುರ ವಿದ್ಯೋದಯ ಕಾಲೇಜಿನ ಪ್ರಾಧ್ಯಾಪಕಿ ಡಾ. ಸಿ.ಜಿ. ಉಷಾದೇವಿ ಅವರು ಮಾತನಾಡಿದರು. ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ವಚನಗಳ ಗಾಯನ ಕಾರ್ಯಕ್ರಮ ನಡೆಯಿತು.