ಹಿತರಕ್ಷಣಾ ವೇದಿಕೆಗೆ ನೇಮಕ
ಮೈಸೂರು: ಸರ್ವಜನಾಂಗ ಹಿತರಕ್ಷಣಾ ವೇದಿಕೆಯ ಕೆ.ಆರ್. ಕ್ಷೇತ್ರದ ಮಹಾಪ್ರಧಾನ ಕಾರ್ಯದರ್ಶಿಯಾಗಿ ಆರ್. ಸಿದ್ದಯ್ಯ ಅವರನ್ನು ನೇಮಕ ಮಾಡಲಾಗಿದೆ.
ಜೈನ ಬ್ರಾಹ್ಮಣ ಸಮಾಜಕ್ಕೆ ಆಯ್ಕೆ
ಮೈಸೂರು: ನಗರದ ಜೈನ ಬ್ರಾಹ್ಮಣ ಸಮಾಜದ 2013-16ನೇ ಸಾಲಿನ ಆಡಳಿತ ಮಂಡಳಿಯ ಕಾರ್ಯಕಾರಿ ಸಮಿತಿಗೆ ಸದಸ್ಯರಾಗಿ ಎಂ.ಪಿ.ಅರವಿಂದ ತಿಲಕ, ಎನ್.ಜ್ಞಾನಚಂದ್ರ, ಸಿ.ಎನ್.ರಮೇಶ್, ಕೆ.ಜೆ.ಜೀವಂದರನ್, ಜಿನರಾಜ ಪ್ರಸಾದ್, ಡಿ. ಕಲಾಧರ ಪಂಡಿತ್, ಮಹೇಂದ್ರನ್, ರಾಜೇಶ್, ಬಿ.ವಸುಪಾಲ ಪಂಡಿತ, ಡಿ.ಶಾಂತಿನಾಥ ಪಂಡಿತ್, ಎಸ್.ಪಿ.ಬ್ರಹ್ಮದೇವಯ್ಯ, ನಾಗರಾಜು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕೊ.ಸು.ನರಸಿಂಹಮೂರ್ತಿ ತಿಳಿಸಿದ್ದಾರೆ.
10ರಂದು ನಗರ ಮಟ್ಟದ ರಸ್ತೆ ಓಟ
ಮೈಸೂರು: ಇಲ್ಲಿನ ರಾಮಕೃಷ್ಣನಗರದ ದಕ್ಷಿಣ ವಲಯ ದೈಹಿಕ ಶಿಕ್ಷಣ ಶಿಕ್ಷಕರ ಸಹಯೋಗದಲ್ಲಿ ಆ.10ರ ಬೆಳಗ್ಗೆ 6.30ಕ್ಕೆ ರಾಮಕೃಷ್ಣನಗರದ ಆಂದೋಲನ ವೃತ್ತದಲ್ಲಿ ನಗರದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಬಾಲಕ, ಬಾಲಕಿಯರಿಗಾಗಿ 67ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಗರ ಮಟ್ಟದ ರಸ್ತೆ ಓಟ ಸ್ಪರ್ಧೆ ಏರ್ಪಡಿಸಿದೆ. ಆ.8ರ ಸಂಜೆ 5ಕ್ಕೆ ನೋಂದಣಿಗೆ ಕಡೆ ದಿನವಾಗಿದ್ದು, ಹೆಚ್ಚಿನ ವಿವರಗಳಿಗೆ ಪ್ರಕಾಶ್, ಮೊ. 9448306311, ರಾಘವೇಂದ್ರ, ಮೊ. 9164997757 ಸಂಪರ್ಕಿಸಿ.
ಕ್ರೀಡಾಂಗಣ ಜಾಗ ಉಳಿಸಿ: ಪ್ರಕಾಶ್
ಮೈಸೂರು: ನಗರದ ಚಾಮುಂಡಿ ಕ್ರೀಡಾಂಗಣವನ್ನು ಬಿಡಿ ಬಿಡಿ ಭಾಗಗಳನ್ನಾಗಿ ಮಾಡದೆ ಒಟ್ಟಾರೆ ವಿಸ್ತೀರ್ಣವನ್ನು ಕಾಪಾಡಿಕೊಂಡು ಹೋಗುವಂತೆ ಯುವ ಕಾಂಗ್ರೆಸ್ ಮುಖಂಡ ಕುರುಬಾರಹಳ್ಳಿ ಜೆ. ಪ್ರಕಾಶ್ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ಕ್ರೀಡೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸುಮಾರು 4000 ಆಸನಗಳ ವ್ಯವಸ್ಥೆಯುಳ್ಳ ಚಾಮುಂಡಿ ಕ್ರೀಡಾಂಗಣದ ಆಸುಪಾಸಿನಲ್ಲಿ ಈಜುಕೊಳ, ಒಳಾಂಗಣ ಕ್ರೀಡಾಂಗಣ, ಹಾಕಿ ಮೈದಾನ ಇತ್ಯಾದಿಗೆ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಪಾರ್ಕಿಂಗ್ ವ್ಯವಸ್ಥೆ ಬಿಗಡಾಯಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.