ಜೆಎಸ್ಎಸ್ ವಿದ್ಯಾರ್ಥಿ ಪದಾಧಿಕಾರಿಗಳ ಆಯ್ಕೆ
ಕ.ಪ್ರ.ವಾರ್ತೆ ಮೈಸೂರು ಆ. 8
ನಗರದ ಊಟಿ ರಸ್ತೆಯಲ್ಲಿರುವ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ 2013-14 ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆಗೆ ಗುರುವಾರ ನಡೆದ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.
ಕಲಾ ವಿಭಾಗದಿಂದ ಕಾರ್ಯದರ್ಶಿಯಾಗಿ ಬಿ.ಭರತ್, ಸಹ ಕಾರ್ಯದರ್ಶಿಯಾಗಿ ಎಚ್.ಎನ್. ಗಣೇಶ್, ಕ್ರೀಡಾ ಕಾರ್ಯದರ್ಶಿಯಾಗಿ ಟಿ.ಆರ್. ಆದರ್ಶ್, ವಾಣಿಜ್ಯ ವಿಭಾಗದಿಂದ ಕಾರ್ಯದರ್ಶಿಯಾಗಿ ಎಚ್.ಎಚ್. ಪ್ರದೀಪ್, ಸಹಕಾರ್ಯದರ್ಶಿಯಾಗಿ ಎಂ.ಪಿ. ಕಾರ್ತಿಕ್ ಹಾಗೂ ಕ್ರೀಡಾ ಕಾರ್ಯದರ್ಶಿಯಾಗಿ ಆರ್. ಜೀವನ್, ವಿಜ್ಞಾನ ವಿಭಾಗದಿಂದ ಕಾರ್ಯದರ್ಶಿಯಾಗಿ ಆರ್. ಚೇತನ್ಕುಮಾರ್, ಸಹ ಕಾರ್ಯದರ್ಶಿಯಾಗಿ ಕೆ. ರಂಜಿತ ಹಾಗೂ ಕ್ರೀಡಾ ಕಾರ್ಯದರ್ಶಿಯಾಗಿ ವಿ.ಎನ್. ನವೀನ್ ಕುಮಾರ್ ಆಯ್ಕೆಯಾಗಿದ್ದಾರೆ ಎಂದು ಪ್ರಾಂಶುಪಾಲ ಸಾಂಬಶಿವಯ್ಯ ತಿಳಿಸಿದ್ದಾರೆ.