ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಟ್ಯಾಲೆಂಟ್ ಶಾಲೆಯಲ್ಲಿ ರಂಜಾನ್ ಆಚರಣೆ

Rashmi Kasaragodu
Updated On : 9 Aug 2013, 12:52 pm

ಕ.ಪ್ರ.ವಾರ್ತೆ   ಹುಣಸೂರು   ಆ. 8
ನಮ್ಮಲ್ಲಿ ಎಷ್ಟೆ ವಿಜ್ಞಾನ, ತಂತ್ರಜ್ಞಾನ ಮುಂದುವರೆದಿದ್ದರೂ ಎಲ್ಲಾ ಧರ್ಮಗಳ ಧಾರ್ಮಿಕ ಆಚರಣೆ, ಆಚಾರ- ವಿಚಾರ, ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಟ್ಯಾಲೆಂಟ್ ಸಂಸ್ಥೆಯ ಆಶಯ ಅರ್ಥಪೂರ್ಣವಾದದ್ದು ಎಂದು ಜಾಮಾತೆ ಇಸ್ಲಾಂ ಹಿಂದ್ನ ಮುಖಂಡ ಮುಸ್ತಾಫಾ ಹೇಳಿದರು.
ಪಟ್ಟಣದ ಟ್ಯಾಲೆಂಟ್ ಶಾಲೆಯಲ್ಲಿ ಶನಿವಾರ ರಂಜಾನ್ ಹಬ್ಬದ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಮುಸ್ಲಿಮರು ಉಪವಾಸ ವ್ರತ ನಡೆಸುವ ರಂಜಾನ್ ಹಬ್ಬ ಅನೇಕ ಕಾರಣಗಳಿಂದ ಪವಿತ್ರವಾದದ್ದು. ಈ ಹಬ್ಬ ಮನುಷ್ಯನನ್ನು ಮನುಷ್ಯನನ್ನಾಗಿಸುವ, ಉತ್ತಮ ಸಂಸ್ಕಾರದ ಜೀವನ ನಡೆಸುವುದನ್ನು ಕಲಿಸಿಕೊಡಲಿದೆ ಎಂದರು.ಮುಖಂಡ ಸೈಯದ್ ಸನೀತ ಮಾತನಾಡಿದರು.
ಸಂಸ್ಥೆ ಅಧ್ಯಕ್ಷ ನಾರಾಯಣ ರೈ, ಸಂಸ್ಥಾಪಕ ನವೀನ್ ರೈ, ಪೋಷಕರಾದ ಇಮ್ತಿಯಾಜ್ ಪಾಷ, ಅಬಿದಿನ್, ಸಂಸ್ಥೆಯ ಪ್ರಾಂಶುಪಾಲ ರವಿ ದೀಪಕ್ ಮಾತನಾಡಿದರು. ಶಾಲೆಯ ಮುಸ್ಲಿಂ ವಿದ್ಯಾರ್ಥಿಗಳು ರಂಜಾನ್ ಕುರಿತು ಮಾತನಾಡಿದರು.  ಪ್ರಾರ್ಥನೆ, ಕವಾಲಿ ನಡೆಸಿ ಕೊಟ್ಟರು. ಶಾಲಾ ಮಕ್ಕಳು ಮತ್ತು ಪೋಷಕರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement