ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಾಳೆಯಿಂದ ರಾಜ್ಯ ಮಟ್ಟದ ಥ್ರೋಬಾಲ್ ಪಂದ್ಯಾವಳಿ

Rashmi Kasaragodu
Updated On : 9 Aug 2013, 12:49 pm

ಮೈಸೂರು: ಪುರುಷ ಹಾಗೂ ಮಹಿಳೆಯರ ಆಹ್ವಾನಿತ ತಂಡಗಳ ರಾಜ್ಯ ಮಟ್ಟದ ಥ್ರೋಬಾಲ್ ಪಂದ್ಯಾವಳಿಯು ಮೈಸೂರಿನ ಸರಸ್ವತಿಪುರಂನ ಸೋಮಾನಿ ಬಿ.ಇಡಿ ಕಾಲೇಜು ಕ್ರೀಡಾಂಗಣದಲ್ಲಿ ಆ.10 ಮತ್ತು 11 ರಂದು ನಡೆಯಲಿದೆ.
ಮೈಸೂರು ಜಿಲ್ಲಾ ಅಮೆಚೂರ್ ಥ್ರೋಬಾಲ್ ಅಸೋಸಿಯೇಷನ್ ಮತ್ತು ಓಂಕಾರಮಲ್ ಸೋಮಾನಿ ಶಿಕ್ಷಣ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ಈ ಪಂದ್ಯಾವಳಿಯನ್ನು ಆ.10 ರಂದು ಸಂಜೆ 6 ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಉದ್ಘಾಟಿಸುವರು ಎಂದು ಪಂದ್ಯಾವಳಿ ಸಂಚಾಲಕ ಸುಬ್ರಹ್ಮಣ್ಯ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇನ್ಸ್ಸ್ಟಿಟ್ಯೂಟ್ ಆಫ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ನಾಗರಾಜ್ ಅಧ್ಯಕ್ಷತೆ ವಹಿಸುವರು. ಟ್ರಸ್ಟಿ ಎಂ.ಪುಟ್ಟಸ್ವಾಮಿ, ಒಣಭೂಮಿ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಆರ್. ಮೋಹನಕುಮಾರ್, ಮೈಸೂರು ಜಿಲ್ಲಾ ಅಮೆಚೂರ್ ಥ್ರೋಬಾಲ್ ಸಂಸ್ಥೆ ಅಧ್ಯಕ್ಷೆ ಮಸೂದ್ ಜಾವೀದ್ ಹಾಗೂ ಓಂಕಾರ್ ಸೋಮಾನಿ ಶಿಕ್ಷಣ ಸಂಸ್ಥೆ ಪ್ರಾಂಶುಪಾಲೆ ಡಾ. ಬಿ.ಎನ್. ಆಶಾ ಮತ್ತಿರರರು ಭಾಗವಹಿಸುವರು ಎಂದು ತಿಳಿಸಿದರು.
ಪಂದ್ಯಾವಳಿಯಲ್ಲಿ ಪುರುಷರ ವಿಭಾಗದ 8 ತಂಡಗಳು ಹಾಗೂ ಮಹಿಳೆಯರ ವಿಭಾಗದಲ್ಲಿ 6 ತಂಡಗಳು ಭಾಗವಹಿಸಲಿವೆ ಎಂದರು.
ಆ.11 ರಂದು ಮಧ್ಯಾಹ್ನ 3 ಕ್ಕೆ ನಡೆಯಲಿರುವ ಸಮಾರೋಪದಲ್ಲಿ ಕೈಗಾರಿಕೋದ್ಯಮಿ ಸುಧೀರ್ ಭಟ್ ಬಹುಮಾನ ವಿತರಿಸುವರು. ಗೆದ್ದ ತಂಡಗಳಿಗೆ ಟ್ರೋಫಿಯ ಜತೆಗೆ ನಗದು ಬಹುಮಾನ ನೀಡಲಾಗುವುದು. ಭಾಗವಹಿಸುವ ತಂಡಗಳಿಗೆ ಊಟ ಹಾಗೂ ವಸತಿ ಸೌಕರ್ಯ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು. ಕಾರ್ಯದರ್ಶಿ ಎನ್. ಕಾಶೀನಾಥ್, ಸದಸ್ಯ ಶ್ರೀನಿವಾಸ್  ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement