ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬದನೆಕುಪ್ಪೆಯಲ್ಲಿ ಬತ್ತ ಬೆಳೆ ಪ್ರಾತ್ಯಕ್ಷಿಕೆ

Rashmi Kasaragodu
Updated On : 9 Aug 2013, 12:51 pm

ಎಚ್.ಡಿ. ಕೋಟೆ: ತಾಲೂಕಿನ ಅಂತರಸಂತೆ ವಲಯದ ಬದನೆಕುಪ್ಪೆ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪದ್ದತಿಯಡಿ ಬತ್ತ ಬೇಸಾಯದ ಕುರಿತು ನಡೆದ ತರಬೇತಿ ಪ್ರಾತ್ಯಕ್ಷಿಕೆಯನ್ನು ಕೃಷಿ ಅಧಿಕಾರಿ ಲಿಂಗಾರೆಡ್ಡಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಶ್ರೀ ಪದ್ಧತಿ ಬತ್ತ ಬೇಸಾಯ, ಅನುಸಿರಸಬೇಕಾದ ಕ್ರಮ, ಬಿತ್ತನೆ ಬೀಜದ ಬಳಕೆ, ಬೀಜದ ಆಯ್ಕೆ ಬಗ್ಗೆ ವಿವರಿಸಿದರು.
ರೈತರು ಇಂತಹ ಪದ್ದತಿ ಅಳವಡಿಸಿಕೊಳ್ಳುವ ಮೂಲಕ ಕಡಿಮೆ ವೆಚ್ಚದಲ್ಲಿ ಅಧಿಕ ಇಳುವರಿ ಪಡೆಯಲು ಸಾಧ್ಯ ಎಂದರು. ಯೋಜನೆಯ ಹೈನುಗಾರಿಕಾ ಅಧಿಕಾರಿ ಸದಾಶಿವ ನಾಯಕ್ ಅವರು, ಶ್ರೀ ಪದ್ಧತಿಯಲ್ಲಿ ಅನುಸರಿಸಬೇಕಾದ ಕ್ರಮಗಳು ಮತ್ತು ನಿರ್ವಹಣೆ ಬಗ್ಗೆ ಪ್ರಾತ್ಯಕ್ಷಿಕೆಯ ತರಬೇತಿ ನೀಡಿದರು. ವಲಯದ ಮೇಲ್ವಿಚಾರಕ ಹರಿಶ್ಚಂದ್ರ ಸುವರ್ಣ, ವಲಯದ ಸೇವಾಪ್ರತಿನಿಧಿಗಳಾದ ಮಂಜು, ಭಾನುಮತಿ, ಜಯಮ್ಮ, ಶ್ರೀಕಂಠ ಹಾಗೂ ಸುತ್ತಲಿನ ಗ್ರಾಮದ ರೈತರು ಸೇರಿದಂತೆ ಮತ್ತಿತರರು ತರಬೇತಿಯಲ್ಲಿ ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement