ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

'ಸಾಂಸ್ಕೃತಿಕ ಚಟುವಟಿಕೆಗೆ ಆದ್ಯತೆ ಇರಲಿ'

Rashmi Kasaragodu
Updated On : 9 Aug 2013, 12:50 pm

ಕ.ಪ್ರ.ವಾರ್ತೆ   ಮೈಸೂರು   ಆ. 8
ಯುವ ಜನತೆಗೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಬದುಕಿನ ಅಂಗವಾಗಲಿ ಎಂದು ನಾಟ್ಯ ವಿದುಷಿ ನಂದಿನಿ ಈಶ್ವರ್ ಹೇಳಿದರು.
ಗೀತಾ ಶಿಶು ಶಿಕ್ಷಣ ಸಂಘದ ಬದರಿ ಪ್ರಸಾದ್ಜೀ ಪದವಿಪೂರ್ವ ಕಾಲೇಜು ಮತ್ತು ಸಿಂಹಸುಬ್ಬ ಮಹಾಲಕ್ಷ್ಮಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಗುರುವಾರ ಏರ್ಪಡಿಸಿದ್ದ ಸಾಂಸ್ಕೃತಿಕ ವೇದಿಕೆ ಹಾಗೂ ಪ್ರತಿಭಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ದೇಶೀಯ ಸಂಸ್ಕೃತಿ ಪುಟಿದೇಳಲಿ: ಇಂದು ಜೀವನ ಶೈಲಿ ಬದಲಾವಣೆ ಹಾಗೂ ಪಾಶ್ಚಾತ್ಯ ಸಂಸ್ಕೃತಿ ಪ್ರಭಾವದಿಂದ ದೇಶೀಯ ಸಂಸ್ಕೃತಿ ಕ್ಷೀಣಿಸುತ್ತಿದೆ. ಆದ್ದರಿಂದ ಇಂದಿನ ಯುವಜನತೆ ಭಾರತೀಯ ಸಂಸ್ಕೃತಿಯನ್ನು ಬಿಡದೆ ಅದನ್ನು ಉಳಿಸಿ ಬೆಳಸುವ ದಿಕ್ಕಿನಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.
ಶೈಕ್ಷಣಿಕ ಚಟುವಟಿಕೆಗಳ ಜತೆಗೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ. ಕೇವಲ ಗೊಂಬೆ ಇಟ್ಟರೆ ಸಾಲದು ಅದಕ್ಕೆ ಅಲಂಕಾರವೂ ಬಹುಮುಖ್ಯ. ಅಂತೆಯೇ ವಿದ್ಯೆಯ ಜತೆಗೆ ಸಹಪಠ್ಯ ಕಲಿತರೆ ವ್ಯಕ್ತಿತ್ವಕ್ಕೆ ಶೋಭೆ ತರಲಿದೆ ಎಂದು ಅವರು ತಿಳಿಸಿದರು.     
ಪ್ರತಿವರ್ಷ ಕಾರ್ಯಕ್ರಮ: ಸಂಸ್ಥೆ ಗೌರವ ಕಾರ್ಯದರ್ಶಿ ವನಜಾ ಬಿ. ಪಂಡಿತ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕಲೆ ಹಾಗೂ ಸಂಸ್ಕೃತಿ ಬಗ್ಗೆ ಆಸಕ್ತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಅನೇಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತಾ ಬಂದಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಮೆರೆಯಬೇಕು ಎಂದು ಸಲಹೆ ನೀಡಿದರು.
ಪ್ರಾಂಶುಪಾಲ ಗಂಗಾಧರ, ಶೈಕ್ಷಣಿಕ ನಿರ್ದೇಶಕ ಬಿ. ವೆಂಕಟಶೇಷಯ್ಯ ಹಾಗೂ ವೇದಿಕೆ ಸಂಚಾಲಕಿ ನಂದಿತಾ ರಾವ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement