ಹುಲಿ ಪ್ರತ್ಯಕ್ಷ; ಹೆಗ್ಗಡಾಪುರ ಸುತ್ತಮುತ್ತ ಆತಂಕ
ಕ.ಪ್ರ.ವಾರ್ತೆ ಹುಣಸೂರು ಆ. 8
ತಾಲೂಕಿನ ಹೆಗ್ಗಡಾಪುರ ಗ್ರಾಮದ ಬಳಿ ಇರುವ ಕೆರೆಯ ಸಮೀಪ ಹುಲಿಯೊಂದು ಪ್ರತ್ಯಕ್ಷವಾಗಿ ಸಾರ್ವಜನಿಕರು ಭಯ ಭೀತರಾಗಿದ್ದಾರೆ.
ಹೆಗ್ಗಡಾಪುರ ಕೆರೆಯ ಏರಿಯ ಪಕ್ಕದ ಜಮೀನಿನಲ್ಲಿ ಸೋಮವಾರ ಹುಲಿಯು ಕುರಿಯನ್ನು ತಿಂದಿದೆ. ಬಳಿಕ ಮಂಗಳವಾರ ಸಹ ಹುಲಿಯು ಜಮೀನಿನಲ್ಲಿ ಪ್ರತ್ಯಕ್ಷವಾಗಿದ್ದರಿಂದ ಗಾಬರಿಗೊಂಡ ಗ್ರಾಮಸ್ಥರು, ಅರಣ್ಯ ಇಲಾಖೆಯವರಿಗೆ ವಿಚಾರ ತಿಳಿಸಿದ್ದಾರೆ.
ಅರಣ್ಯಾಧಿಕಾರಿಗಳ ಭೇಟಿ: ಸ್ಥಳಕ್ಕೆ ಎಚ್.ಡಿ. ಕೋಟೆ, ಮೇಟಿಕುಪ್ಪೆ ವಲಯಾರಣ್ಯಾಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಕಬ್ಬಿನ ಗದ್ದೆಯಲ್ಲಿ ಶೋಧಿಸುತ್ತಿದ್ದಾರೆ.
ರಾತ್ರಿಯಾದ ಕಾರಣ ಹುಲಿಯನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ, ರಾತ್ರಿ ಕೆರೆಯ ಮೇಲೆ ಸಾರ್ವಜನಿಕರು ಪ್ರಯಾಣಿಸುವಾಗ ಜಾಗರೂಕರಾಗಿರುವಂತೆ ಕಾವಲು ಹಾಕಲಾಗಿತ್ತು.
ಬಳಿಕ ಗುರುವಾರ ಬೆಳಗ್ಗೆ ಇಲಾಖೆಯವರು ಈ ಪ್ರದೇಶವನ್ನು ಸುತ್ತುವರಿದು ಶೋಧನಾ ಕಾರ್ಯ ನಡೆಸಿದರೂ ಸಹ ಹುಲಿ ಪತ್ತೆಯಾಗಲಿಲ್ಲ.