ಹೊಲಿಗೆ ತರಬೇತಿ ಸಮಾರೋಪ
ಎಚ್.ಡಿ. ಕೋಟೆ: ಸಾಕ್ಷರ ಭಾರತ್, ಜೆಎಸ್ಎಸ್ ಜನ ಶಿಕ್ಷಣ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಬೆಳಗನಹಳ್ಳಿ ಗ್ರಾಮದಲ್ಲಿ ನವ ಸಾಕ್ಷಕರಿಗಾಗಿ 4 ತಿಂಗಳ ಹೊಲಿಗೆ ತರಬೇತಿ ಸಮಾರೋಪ ಸಮಾರಂಭ ನಡೆಯಿತು.
ಸಾಕ್ಷರ ಭಾರತ್ ಕಾರ್ಯಕ್ರಮದ ಜಿಲ್ಲಾ ಸಂಯೋಜಕ ನಾಗರಾಜು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರದವರು ಮಹಿಳೆಯರಿಗೆ ಸಾಮಾನ್ಯ ಶಿಕ್ಷಣದ ಜೊತೆಗೆ ಉಚಿತ ಹೊಲಿಗೆ ತರಬೇತಿ ನೀಡುತ್ತಿದೆ. ನವ ಸಾಕ್ಷರರು ತಮ್ಮ ಕಲಿಕೆಯ ಜೊತೆಗೆ ತಮ್ಮ ಜೀವನವನ್ನು ಸಮರ್ಪಕವಾಗಿ ರೂಢಿಸಿಕೊಳ್ಳಬಹುದಾಗಿದೆ. ಈ ತರಬೇತಿ ಪಡೆದವರು ಸ್ವಂತಉದ್ಯೋಗ ಆರಂಭಿಸಿಬೇಕು ಎಂದು ಕರೆ ನೀಡಿದರು. ಜೆಎಸ್ಎಸ್ ಜನಶಿಕ್ಷಣ ಸಂಸ್ಥೆ ಸಂಯೋಜಕ ಚಂದ್ರಕಾಂತ್ ಮಾತನಾಡಿ, ತರಬೇತಿ ಪಡೆದ ಪ್ರತಿಯೊಬ್ಬ ಮಹಿಳೆಗೂ ಸಂಸ್ಥೆಯ ವತಿಯಿಂದ ಅರ್ಹತಾ ಪತ್ರ ನೀಡಲಾಗುತ್ತಿದೆ ಎಂದರು.