3 ಕಡೆ ತಂಬಾಕು ಬ್ಯಾರನ್ಗಳ ಭಸ್ಮ
ಪಿರಿಯಾಪಟ್ಟಣ: ತಾಲೂಕಿನ ಮೂರು ಗ್ರಾಮಗಳಲ್ಲಿ ಮೂರು ಪ್ರತ್ಯೇಕ ತಂಬಾಕು ಹದಗೊಳಿಸುವ ಬ್ಯಾರನ್ಗಳು ಸುಟ್ಟು ಹೋಗಿರುವ ಘಟನೆ ಜರುಗಿದೆ.
ತಾಲೂಕಿನ ಕೆ. ಹೊಸಳ್ಳಿ ಗ್ರಾಮದ ಶಿವಣ್ಣೇಗೌಡ, ಭುವನಹಳ್ಳಿ ಗ್ರಾಮದ ಸಂಜೀವಶೆಟ್ಟಿ, ಬಸಲಾಪುರ ಗ್ರಾಮದ ಮರಿಗೌಡ ಎಂಬವರಿಗೆ ಸೇರಿದ ಬ್ಯಾರನ್ಗಳು ತಂಬಾಕು ಹದಗೊಳಿಸುತ್ತಿದ್ದ ಸಂದರ್ಭದಲ್ಲಿ ಸುಟ್ಟು ಹೋಗಿದ್ದು, ಲಕ್ಷಾಂತರ ಮೌಲ್ಯದ ತಂಬಾಕು ಹಾಗೂ ಇತರೆ ವಸ್ತುಗಳು ಸುಟ್ಟು ಹೋಗಿವೆ. ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು, ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.