ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅರನೇಹಳ್ಳಿಯಲ್ಲಿ ಆಚರಣೆ

Rashmi Kasaragodu
Updated On : 10 Aug 2013, 12:17 pm

ರಾವಂದೂರು: ಪಿರಿಯಾಪಟ್ಟಣ ತಾಲೂಕಿನ ಅರೇನಹಳ್ಳಿ ಗ್ರಾಮದಲ್ಲಿ ಮುಸ್ಲಿಂ ಸಮುದಾಯದವರು ಶುಕ್ರವಾರ ಪವಿತ್ರ ರಂಜಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಮುಸ್ಲಿಂ ಸಮುದಾಯದವರೆಲ್ಲರೂ ಒಟ್ಟಾಗಿ ಗ್ರಾಮದಲ್ಲಿ ಮೆರವಣಿಗೆ ನಡೆಸಿದರಲ್ಲದೆ ಪಿರಿಯಾಪಟ್ಟಣ ರಾವಂದೂರು ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸೇರಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಮಸೀದಿಯ ಧರ್ಮಗುರುಗಳಿಂದ ರಂಜಾನ್ ಕುರಿತಾದ ವಿಶೇಷ ಧಾರ್ಮಿಕ ಪ್ರವಚನ ನೆರವೇರಿತು.


ಬೈಲಕುಪ್ಪೆಯಲ್ಲಿ ಸಾಮೂಹಿಕ ಪ್ರಾರ್ಥನೆ
ಬೈಲಕುಪ್ಪೆ: ರಂಜಾನ್ ಪ್ರಯುಕ್ತ ಬೈಲಕುಪ್ಪೆಯ ಮಸೀದಿಯಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಜಾಮೀಯ ಮಸೀದಿ ಕಮಿಟಿಯಕಮಿಟಿ ಅಧ್ಯಕ್ಷ ಗಫಾರ್ ಖಾನ್, ಕಾರ್ಯದುರ್ಶಿ ಅಪ್ಸರ್ ಪಾಷಾ, ಖಜಾಂಚಿ ಖಲೀಲ ಖಾನ್, ಉಪಾಧ್ಯಕ್ಷ ಮಕ್ಬುಲ್ ಪಾಷ ಸದಸ್ಯರಾದ ಸಯ್ಯದ್ ಅನ್ಸರ್, ನೂರ್ ಪಾಷ, ಸಿಕಂದರ್ ಪಾಷ, ಸೈಫುಲ್ ಸೇರಿ 400ಕ್ಕು ಹೆಚ್ಚು ಜನ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement