ಕೆ.ಆರ್. ನಗರದಲ್ಲಿ ರಂಜಾನ್ ಆಚರಣೆ
ಕೆ.ಆರ್. ನಗರ: ರಂಜಾನ್ ಆಚರಣೆಯನ್ನು ಪಟ್ಟಣದಲ್ಲಿ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಿದರು.
ಇಲ್ಲಿನ ಜಾಮೀಯ ಮಸೀದಿಯಿಂದ ಕೃಷ್ಣರಾಜ ವೃತ್ತ ಮೂಲಕ ರಂಜಾನ್ ಮೆರವಣಿಗೆ ನಡೆಸಿ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಪ್ರಾರ್ಥನೆಯಲ್ಲಿ ಪಾಲ್ಗೊಂಡು ಶುಭಾಶಯ ಕೋರಿದ ಸಂಸದ ಎಚ್. ವಿಶ್ವನಾಥ್, ನಿರ್ಮಾಣ ಹಂತದಲ್ಲಿರುವ ಶಾದಿಮಹಲ್‌ಗೆ ಸಂಸದರ ನಿಧಿಯಿಂದ 5 ಲಕ್ಷ ರು. ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಶಾಸಕ ಸಾ.ರಾ. ಮಹೇಶ್, ಮೂಳೆತಜ್ಞ ಡಾ. ಮೆಹಬೂಬ್‌ಖಾನ್, ಪುರಸಭಾ ಮಾಜಿ ಅಧ್ಯಕ್ಷ ರಿಜ್ವಾನ್ ಉಲ್ಲಾಖಾನ್, ಮಾಜಿ ಸದಸ್ಯ ಸಿರಾಜ್, ನಗರ ಕಾಂಗ್ರೆಸ್ ವಕ್ತಾರ ಜಾಬೀರ್ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.