ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಜಿಲ್ಲೆಯ ವಿವಿಧೆಡೆ ರಂಜಾನ್ ಆಚರಣೆ

Rashmi Kasaragodu
Updated On : 10 Aug 2013, 12:17 pm

ಕ.ಪ್ರ.ವಾರ್ತೆ     ಹುಣಸೂರು     ಆ. 9
ರಂಜಾನ್ ಹಬ್ಬದ ಅಂಗವಾಗಿ ಮುಸ್ಲಿಂ ಸಮುದಾಯದವರು ಪಟ್ಟಣದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಪಟ್ಟಣದ ವಿವಿಧ ಬೀದಿಗಳಲ್ಲಿರುವ ಮಸೀದಿಗಳ ಗುರುಗಳು, ಪಟ್ಟಣ ಮತ್ತು ಆಜಾದ್ ನಗರದ ಮುಸ್ಲಿಂ ಸಮುದಾಯದವರು ಕೂಡ ಪಟ್ಟಣದ ಈದ್ಗಾ ಮೈದಾನಕ್ಕೆ ಮೆರವಣಿಗೆ ಮೂಲಕ ಆಗಮಿಸಿ ತಮ್ಮ ಪ್ರಾರ್ಥನೆಯನ್ನು ಯಶಸ್ವಿಯಾಗಿ ಮುಗಿಸಿ ಸಂತೋಷ ಹಂಚಿಕೊಂಡರು.
ವೃತ್ತ ನಿರೀಕ್ಷಕ ಗಜೆಂದ್ರ ಪ್ರಸಾದ್ ಅವರ ನೇತೃತ್ವದಲ್ಲಿ ಟೌನ್ ಎಸ್‌ಐ ಹರಿವರ್ಧನ್ ಮತ್ತು ಸಿಬ್ಬಂದಿ ಬಂದೋಬಸ್ತ್ ಕಲ್ಪಿಸಿದ್ದರು.
ದಾವಣೀ ಬೀದಿಯ ಮಸೀದಿ ಮುಸ್ಲಿಂ ಗುರು ಖಾಯ ಮುದ್ದಿನ್, ಕಾರ್ಖಾನೆ ಬೀದಿಯ ಗುರು ಗುರುಷಾ ಆಲಂ ನೇತೃತ್ವದಲ್ಲಿ ಸಾವಿರಾರು ಮಂದಿ ಮುಸ್ಲಿಮರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement