ತಂಬಾಕು ಬ್ಯಾರನ್ಗೆ ಆಕಸ್ಮಿಕ ಬೆಂಕಿ
ಹುಣಸೂರು: ತಂಬಾಕು ಹದ ಮಾಡುತ್ತಿದ್ದ ವೇಳೆ ಆಕಸ್ಮಿಕ ಬೆಂಕಿ ತಗುಲಿ ಸಿಂಗಲ್ ಬ್ಯಾರನ್ ಸಂಪೂರ್ಣ ಬೆಂಕಿಗೆ ಆಹುತಿಯಾಗಿರುವ ಘಟನೆ ಕಡೆಮನುಗನಹಳ್ಳಿಯಲ್ಲಿ ಬುಧವಾರ ರಾತ್ರಿ ಜರುಗಿದೆ.
ಹನಗೋಡಿಗೆ ಸಮೀಪದ ಕಡೆಮನುಗನಹಳ್ಳಿ ಗ್ರಾಮದ ರಾಜೇಗೌಡರ ಪತ್ನಿ ಲಕ್ಷ್ಮಮ್ಮರಿಗೆ ಸೇರಿದ್ದ ತಂಬಾಕು ಬ್ಯಾರನ್ ಸುಟ್ಟುಹೋಗಿದೆ. ಸುಮಾರು 1 ಲಕ್ಷ ರು. ನಷ್ಟವುಂಟಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಬರುವ ವೇಳೆಗೆ ಬಹುತೇಕ ಹೊಗೆಸೊಪ್ಪು ಬೆಂಕಿಗೆ ಆಹುತಿಯಾಗಿತ್ತಾದರೂ ಅಕ್ಕ- ಪಕ್ಕದ ಮನೆಗಳಿಗೆ ಬೆಂಕಿ ಹರಡುವುದನ್ನು ತಪ್ಪಿಸಿದರು.