ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮಹಿಳೆಯರು ಆರ್ಥಿಕವಾಗಿ ಸಬಲರಾಗಲಿ: ವರ್ಷ

Rashmi Kasaragodu
Updated On : 10 Aug 2013, 12:17 pm

ಹುಣಸೂರು: ಮಹಿಳೆಯರು ಸರ್ಕಾರದ ಯೋಜನೆಗಳನ್ನು ಬಳಕೆ ಮಾಡಿಕೊಂಡು ಸಣ್ಣ, ಗುಡಿ ಕೈಗಾರಿಕೆ ಮತ್ತು ಹೈನುಗಾರಿಕೆಗಳನ್ನು ಅವಲಂಬಿಸಿಕೊಂಡು ಆರ್ಥಿಕವಾಗಿ ಸಬಲರಾಗುವಂತೆ ಕ್ರೆಡಿಟ್- ಐ ಸಂಸ್ಥೆಯ ಮುಖ್ಯಸ್ಥ ಡಾ. ವರ್ಷ ಕರೆ ನೀಡಿದರು.
ಪಟ್ಟಣದ ಸ್ಫೂರ್ತಿ ಸಂಸ್ಥೆ ಆವರಣದಲ್ಲಿ ಮೈಸೂರು ಎಸ್‌ಜೆಸಿಇ- ಸ್ಟೆಪ್ ಆಪ್ ಹಾಗೂ ಹುಣಸೂರು ಸ್ಫೂರ್ತಿ ಸಂಸ್ಥೆ ಸಂಯಕ್ತಾಶ್ರಯದಲ್ಲಿ ಆಯೋಜಿಸಿದ್ದ ಎಂಟು ವಾರಗಳ ಕಾಲದ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಕಾಲದಂತೆ ಚರ್ಮೋದ್ಯಮ ಇಂದು ಕೇವಲ ಒಂದು ಜನಾಂಗಕ್ಕೆ ಸೀಮಿತ ಕಾಯಕವಾಗಿಲ್ಲ. ಲೆದರ್ ಉದ್ಯಮ ಬೃಹದಾಕಾರವಾಗಿ ಬೆಳೆದಿದೆ.
ಆಧುನಿಕಯುಗದಲ್ಲಿ ಲೆದರ್ ವಸ್ತುಗಳಾದ ಚಪ್ಪಲಿ ಜತೆ ವ್ಯಾನಿಟಿ ಬ್ಯಾಗ್, ಪರ್ಸ್, ವಾಹನಗಳ ಸೀಟ್ ಕವರ್‌ಗಳು ಸೇರಿದಂತೆ ಲೆದರ್‌ನ ಅಗತ್ಯತೆ ಅನಿವಾರ್ಯವಾಗಿದೆ. ಈ ಉದ್ಯಮ ಸ್ಥಾಪಿಸಲು ಹೆಚ್ಚಿನ ಬಂಡವಾಳದ ಅವಶ್ಯಕತೆಯಿಲ್ಲ.
ಆದರೆ ಲಾಭಾಂಶ ಮಾತ್ರ ಹೆಚ್ಚಿದೆ. ಈ ಉದ್ಯಮದ ತರಬೇತಿಗಾಗಿ ಬೆಂಗಳೂರು ಹಾಗೂ ಚೆನ್ನೈನಲ್ಲಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಅಲ್ಲದೇ ಸರ್ಕಾರವೂ ಹಲವಾರು ಯೋಜನೆಗಳ ಮೂಲಕ ಆರ್ಥಿಕ ಧನಸಹಾಯ ನೀಡುತ್ತಿದ್ದು, ಯುವಜನತೆ ಹೆಚ್ಚು ಪಾಲ್ಗೊಂಡಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು ಎಂದರು.
ಸ್ಫೂರ್ತಿ ಸಂಸ್ಥೆಯ ಮುಖ್ಯಸ್ಥೆ ಎ.ಆರ್. ಸುಧಾಮಣಿ ಮಾತನಾಡಿದರು. ಕಾರ್ಯಾಗಾರದಲ್ಲಿ  50 ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement