ಯುವತಿ ಆತ್ಮಹತ್ಯೆ
ಮೈಸೂರು: ಅನಾರೋಗ್ಯದಿಂದ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕುಕ್ಕರಹಳ್ಳಿಯಲ್ಲಿ ನಡೆದಿದೆ. ಕುಕ್ಕರಹಳ್ಳಿಯ ಹುಚ್ಚಯ್ಯರ ಪುತ್ರಿ ಸಿಂಧು (19) ಆತ್ಮಹತ್ಯೆಗೆ ಶರಣಾದವರು. ಆಕೆಗೆ ಆಗಾಗ್ಗೆ ಅನಾರೋಗ್ಯ ಕಾಡುತ್ತಿತ್ತು ಎಂದು ಪೋಷಕರು ತಿಳಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಉಪಾಹಾರದ ಬಳಿಕ ಕೊಠಡಿ ಸೇರಿದ ಆಕೆ ಸಮಯವಾದರೂ ಹೊರಗೆ ಬಾರಲಿಲ್ಲ. ಆಕೆಯ ತಾಯಿ ಕಿಟಕಿಯಿಂದ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.