ಆಟಿಕೆ ಗನ್ ಹಿಡಿದು ಆತಂಕ ಸೃಷ್ಟಿಸಿದ!
ಕ.ಪ್ರ. ವಾರ್ತ್ಣೆ ಮೈಸೂರ್ಣು ಆ.10
ವ್ಯಕ್ತಿಯೊಬ್ಬ ಆಟಿಕೆ ಗನ್ ಹಿಡಿದು ಆತಂಕ ಸೃಷ್ಟಿಸಿದ ಘಟನೆ ಶನಿವಾರ ಬೆಳಗ್ಗೆ ಗಾಂಧಿಚೌಕದಲ್ಲಿ ನಡೆಯಿತು.
ಆಮ್ ಆದ್ಮಿ ಪಕ್ಷದವರು ಆರ್ಟಿಐ ತಿದ್ದುಪಡಿ ವಿರೋಧಿಸಿ ಪ್ರತಿಭಟಿಸುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಕೈಯಲ್ಲಿ ಗನ್ನೊಂದಿಗೆ ಅಡ್ಡಾಡುತ್ತಿದ್ದ. ಇದನ್ನು ಗಮನಿಸಿದ ಪೊಲೀಸರು ಆತನನ್ನು ಹಿಡಿದು ಪರಿಶೀಲಿಸಿದಾಗ ಆಟಿಕೆ ಗನ್ ಎಂಬುದು ಗೊತ್ತಾಯಿತು.
ದೇವರಾಜ ಠಾಣೆಗೆ ಕರೆದುಕೊಂಡು ಹೋದ ಪೊಲೀಸರು ವಿಚಾರಣೆ ನಡೆಸಿದಾಗ ಆತ ಗಾಯತ್ರಿಪುರಂ 2ನೇ ಹಂತ ನಿವಾಸಿ ಸುಲ್ತಾನ್ (25) ಎಂದು ಗೊತ್ತಾಗಿದೆ.
ಸುಲ್ತಾನ್ ಮಾನಸಿಕ ಅಸ್ವಸ್ಥನಾಗಿದ್ದು, ನಿಮ್ಹಾನ್ಸ್ನಲ್ಲಿ ಚಿಕಿತ್ಸೆ ಪಡೆದಿದ್ದ. ಮಕ್ಕಳಿಗಾಗಿ ಆಟಿಕೆ ಗನ್ ಖರೀದಿಸಿದ್ದಾಗಿ ಸುಲ್ತಾನ್ ಹೇಳಿದ್ದಾನೆ. ಕೂಲಂಕಷವಾಗಿ ವಿಚಾರಣೆ ಬಳಿಕ ಸುಲ್ತಾನ್ನನ್ನು ಮನೆಗೆ ಕಳುಹಿಸಿದ್ದಾರೆ.