ಇಂದು ಆರೋಗ್ಯ ಶಿಬಿರ
ಮೈಸೂರು: ಕೆ.ಆರ್. ನಗರ ಶಾಸಕ ಸಾ.ರಾ. ಮಹೇಶ್ ಹುಟ್ಟುಹಬ್ಬ ಅಂಗವಾಗಿ ಎಸ್ಬಿಎಂ ಮಂಜು ಸ್ನೇಹ ಬಳಗವು ಆ.11 ರಂದು ಗೋಕುಲಂ ಮೈದಾನದಲ್ಲಿ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಿದೆ.
ಸ್ಪಟಿಕ ಹೆಲ್ತ್ ಅಂಡ್ ಎಜುಕೇಷನಲ್ ಟ್ರಸ್ಟ್ ಮತ್ತು ರಿವರ್ ವ್ಯೂ ಆಸ್ಪತ್ರೆ ಸಹಯೋಗದಲ್ಲಿ ಈ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ. ಕೀಲುಮೂಳೆ ತಜ್ಞ ಡಾ.ಎ.ಎಚ್. ಹರೀಶ್, ಡಾ. ನದೀಮ್, ಪ್ರಸೂತಿ ಸ್ತ್ರಿರೋಗ ತಜ್ಞ ಡಾ. ಮಂಜುನಾಥ್ ಮತ್ತು ಮಕ್ಕಳ ತಜ್ಞ ಡಾ. ರವಿಕುಮಾರ್ ಈ ಶಿಬಿರದಲ್ಲಿ ಭಾಗವಹಿಸುವುದಾಗಿ ಬಳಗದ ಉಪಾಧ್ಯಕ್ಷ ಗುರುರಾಜ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಾಸಕ ಸಾ.ರಾ. ಮಹೇಶ್, ನ್ಯಾಯಾಧೀಶೆ ಎ.ಕೆ. ನವೀನ ಕುಮಾರಿ, ಜೆಡಿಎಸ್ ನಗರಾಧ್ಯಕ್ಷ ರಾಜಣ್ಣ, ರಂಗಭೂಮಿ ಕಲಾವಿದ ಸುಚೀಂದ್ರ ಪ್ರಸಾದ್, ನಗರ ಜೆಡಿಎಸ್ ಕಾರ್ಯಾಧ್ಯಕ್ಷ ಎಸ್.ಬಿ.ಎಂ. ಮಂಜು ಭಾಗವಹಿಸುವರು ಎಂದು ಅವರು ಹೇಳಿದರು. ವಾಸುದೇವ್, ಬಸವರಾಜ್, ನಾಗೇಂದ್ರ ಇದ್ದರು.