ವೈಭವದ ಕರಗ ಉತ್ಸವ
ಮೈಸೂರು: ಇಲ್ಲಿನ ವಿದ್ಯಾರಣ್ಯಪುರಂನ ಚಾಮುಂಡೇಶ್ವರಿ ಮತ್ತು ಕರಿಮಾರಿಯಮ್ಮನವರ 83ನೇ ವರ್ಷದ ಕರಗ ಮಹೋತ್ಸವವು ಶನಿವಾರ ವಿಜೃಂಭಣೆಯಿಂದ ನಡೆಯಿತು.
ಭವ್ಯವಾದ ಹೂವಿನ ಅಲಂಕೃತ ಪಲ್ಲಕ್ಕಿಯೊಂದಿಗೆ ಕರಿಮಾರಿಯಮ್ಮ ಹಾಗೂ ಚಾಮುಂಡೇಶ್ವರಿ ಅವರ ಉತ್ಸವ ಮೂರ್ತಿಯು ಸಾಂಸ್ಕೃತಿಕ ಹಾಗೂ ಜಾನಪದ ಕಲಾ ತಂಡಗಳೊಂದಿಗೆ ದೇವಸ್ಥಾನದ ಮುಂಭಾಗದಿಂದ ಹೊರಟು ಪ್ರಮುಖ ಬೀದಿಗಳಲ್ಲಿ ಸಾಗಿತು.
ವಿದ್ವಾನ್ ವಿ. ಕೃಷ್ಣಮೂರ್ತಿ ತಂಡದವರ ನಾದಸ್ವರ ವಾದ್ಯ, ವಿದ್ವಾನ್ ಶರತ್ ತಂಡದವರಿಂದ ವೇದ ಪಾರಾಯಣ, ಮಂಗಳೂರಿನ ಗೋಪಾಲಕೃಷ್ಣ ಕಲಾ ಮಂಡಳಿಯ ಯಕ್ಷಗಾನ ಹಾಗೂ ವೇಷದಾರಿ ನೃತ್ಯ, ತಮಿಳುನಾಡಿನ ಪ್ರಸಿದ್ಧ ಪಂಬೈಮೇಳ ಹಾಗೂ ನಯ್ಯಾಂಡಿ ಮೇಳ, ಕಡೂರು ಚಂದ್ರಮೌಳೇಶ್ವರ ತಂಡದವರಿಂದ ದಾಂಡ್ಯ ವೃದ ಮೇಳ ಹಾಗೂ ಮೈಸೂರು ಕಂಸಾಳೆ ಮಹಾದೇವಯ್ಯ ಜಾನಪದ ಕಲಾಕೇಂದ್ರ ಕಲಾವಿದರು ಬೀಸು ಕಂಸಾಳೆ ಹಾಗೂ ನಾಗ ತಂಡದವರು ತಮಟೆ ವಾದ್ಯ ಮತ್ತು ಕರಗ ಕುಣಿತ ಸಾರ್ವಜನಿಕರ ಗಮನ ಸೆಳೆಯಿತು.