ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಹೊಲಿಗೆ ತರಬೇತಿ ಪಡೆದವರಿಗೆ ಪತ್ರ ವಿತರಣೆ

Rashmi Kasaragodu
Updated On : 10 Aug 2013, 11:43 am

ಕ.ಪ್ರ.ವಾರ್ತೆ    ಎಚ್.ಡಿ.ಕೋಟೆ    ಆ. 10
ಬಿಡುವಿನ ಸಮಯದಲ್ಲಿ ಮಹಿಳೆಯರು ತಾವು ಕಲಿತಿರುವ ಹೊಲಿಗೆ ತರಬೇತಿ ಮುಂದುವರಿಸಿಕೊಂಡು ತಮ್ಮ ಜೀವನ ರೂಢಿಸಿಕೊಳ್ಳಬೇಕು. ಆಗ ಮಾತ್ರ ತರಬೇತಿ ನೀಡಿದ ನಮಗೂ ಮತ್ತು ಕಲಿತ ನಿಮಗೂ ಪ್ರಯೋಜನ ಆಗುತ್ತದೆ ಎಂದು ಜೆಎಸ್ಎಸ್ ಜನ ಶಿಕ್ಷಣ ಸಂಸ್ಥೆ ಜಿಲ್ಲಾ ಸಂಯೋಜಕ ಚಂದ್ರಕಾಂತ ಹೇಳಿದರು.
ಅಂತರಸಂತೆ ಗ್ರಾಮದಲ್ಲಿ ಸಿದ್ದ ಉಡುಪು ತರಬೇತಿಯ ಪಡೆದ ಮಹಿಳೆಯರಿಗೆ ಅರ್ಹತಾಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದರಿಂದ ಕುಟುಂಬ ಆದಾಯ ವೃದ್ಧಿ ಆಗುತ್ತದೆ ಎಂದು ಹೇಳಿದರು. ಪ್ರಮಾಣಪತ್ರದಿಂದ ಸರ್ಕಾರ ನೀಡುವ ವಿವಿಧ ಯೋಜನೆ ಅಡಿಯಲ್ಲಿ ತಮ್ಮ ವ್ಯಾಪ್ತಿಗೆ ಬರುವ ತಾಪಂ ಮತ್ತು ಗ್ರಾಪಂ ವತಿಯಿಂದ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದರು. ತರಬೇತಿ ಪಡೆದ 20 ಮಹಿಳೆಯರಿಗೆ ಅರ್ಹತಾಪತ್ರ ನೀಡಲಾಯಿತು. ಹೊಲಿಗೆ ತರಬೇತಿ ನೀಡಿದ ಶಿಕ್ಷಕಿ ಸವಿತಾ ಅವರನ್ನು ಸನ್ಮಾನಿಸಲಾಯಿತು. ಸಾಕ್ಷರ ಭಾರತ್ ತಾ. ಸಂಯೋಜಕಿ ಶೀಲಾ, ಶಿಕ್ಷಕಿ ಸವಿತಾ ಮತ್ತು ತರಬೇತಿ ಪಡೆದ ಮಹಿಳೆಯರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement