ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಆಟೋ ಮಗುಚಿ ವ್ಯಕ್ತಿ ಸಾವು

Rashmi Kasaragodu
Updated On : 12 Aug 2013, 12:34 pm

ಕ.ಪ್ರ.ವಾರ್ತೆ    ಬೈಲಕುಪ್ಪೆ    ಆ.11
ಚಾಲಕನ ನಿಯಂತ್ರಣ ತಪ್ಪಿ ಆಟೋ ಮಗುಚಿಬಿದ್ದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಚಪ್ಪರದಹಳ್ಳಿ ಗ್ರಾಮದ ಬಸವೇಶ್ವರ ದೇವಸ್ಥಾನದ ಬಳಿ ಶನಿವಾರ ರಾತ್ರಿ ನಡೆದಿದೆ.
ಬೈಲಕುಪ್ಪೆ ಸಮೀಪದ ಹೊನ್ನಾಪುರ ಗ್ರಾಮದ ಈಶ್ವರ ಎಂಬವರ ಪುತ್ರ ಅಪ್ಪು ಅಲಿಯಾಸ್ ಮಹೇಶ್ (25) ಮೃತಪಟ್ಟವರು. ಹೊನ್ನಾಪುರ ಗ್ರಾಮದ ಮಲ್ಲೇಶ, ಮಂಗಳಾ, ಮಹೇಶ ಮತ್ತು ಮಹೇಶ ಎಂಬವರು ಶನಿವಾರ ರಾತ್ರಿ ಹಿಟ್ನಳ್ಳಿ ಗ್ರಾಮದ ಶನಿದೇವರ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದ್ದರು. ರಾತ್ರಿ 10ಕ್ಕೆ ಸ್ವಗ್ರಾಮವಾದ ಹೊನ್ನಾಪುರಕ್ಕೆ ತೆರಳುತ್ತಿದ್ದ ಮಾರ್ಗ ಮಧ್ಯೆ ಈ ಅಪಘಾತ ನಡೆದಿದೆ.
ಚಪ್ಪರದಹಳ್ಳಿ ಗ್ರಾಮದ ಬಸವೇಶ್ವರ ದೇವಸ್ಥಾನದ ಬಳಿ ಆಯ ತಪ್ಪಿ ಆಟೋ ಮಗುಚಿದ್ದು, ಮಹೇಶ್ ಮೃತಪಟ್ಟಿದ್ದು, ಒಂದೇ ಕುಟುಂಬದ ಮೂವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಈ ಸಂಬಂಧ ಬೆಟ್ಟದಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement