ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ದೇಣಿಗೆಗೆ ಮನವಿ

Rashmi Kasaragodu
Updated On : 12 Aug 2013, 12:34 pm


ಮೈಸೂರು: ಬೋಧಿಸತ್ವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸಮುದಾಯ ಭವನ ನಿರ್ಮಾಣಕ್ಕೆ ಪ್ರತಿ ಸದಸ್ಯರು ತಲಾ ರು. 1000 ದೇಣಿಗೆ ನೀಡುವಂತೆ ಕಾರ್ಯದರ್ಶಿ ಕೋರಿದ್ದಾರೆ. ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಶೇ.75 ಹಾಗೂ ನಗರದ ಪ್ರದೇಶದಲ್ಲಿ ಶೇ.85 ಕ್ಕಿಂತ ಹೆಚ್ಚು ಅಂಕ ಗಳಿಸಿರುವ ಸಂಘದ ಸದಸ್ಯರ ಮಕ್ಕಳಿಂದ ಪ್ರತಿಭಾ ಪುರಸ್ಕಾರಕ್ಕೆ ಆ.31 ರೊಳಗೆ ಅರ್ಜಿ ಆಹ್ವಾನಿಸಲಾಗಿದೆ. ವಿವರಗಳಿಗೆ ದೂ. 0821- 2540706 ಸಂಪರ್ಕಿಸಬಹುದು.



ನಾಳೆ ಆರೋಗ್ಯ ಶಿಬಿರ
ಮೈಸೂರು: ಅಮೃತಕೃಪಾ ಆಸ್ಪತ್ರೆ ವತಿಯಿಂದ ಆ.13 ರಂದು ಎಚ್.ಡಿ. ಕೋಟೆ ತಾಲೂಕಿನ ಕ್ಯಾತನಹಳ್ಳಿಯಲ್ಲಿ ಹಾಗೂ ಆ.14 ರಂದು ಹೊಸಹಳ್ಳಿಯಲ್ಲಿ ಬೆಳಗ್ಗೆ 10.30 ರಿಂದ ಸಂಜೆ 4 ರವರೆಗೆ ಸಾರ್ವಜನಿಕರಿಗೆ ಆರೋಗ್ಯ ಉಚಿತ ಶಿಬಿರ ಆಯೋಜಿಸಲಾಗಿದೆ. ಆಸಕ್ತರು ದೂ. 0821- 2598822 ಸಂಪರ್ಕಿಸಬಹುದು.
ವಿದ್ಯಾರ್ಥಿ ವೇದಿಕೆ ಉದ್ಘಾಟನೆ
ಎಂಎಂಕೆ ಮತ್ತು ಎಸ್ಡಿಎಂ ಮಹಿಳಾ ಕಾಲೇಜು ಮತ್ತು ಬಾಲಕಿಯರ ಪಿಯು ಕಾಲೇಜಿನ ವಿದ್ಯಾರ್ಥಿ ವೇದಿಕೆಯನ್ನು ಆ.14ರ ಬೆಳಗ್ಗೆ 10.30ಕ್ಕೆ ಮೈಸೂರು ವಿವಿ ಕುಲಸಚಿವ ಪ್ರೊ.ಸಿ. ಬಸವರಾಜು ಉದ್ಘಾಟಿಸುವರು. ಪ್ರೊ. ಕೆ.ವಿ. ದಾಮೋದರ ಗೌಡ, ಎಂ.ವಿ. ಆಶಾ ಭಾಗವಹಿಸುವರು.
ಜೀವನ ಕಲೆ ಶಿಬಿರ
ಕುವೆಂಪುನಗರದ ಸಂಪಿಗೆ ರಸ್ತೆಯಲ್ಲಿರುವ ಆರ್ಟ್ ಆಫ್ ಲೀವಿಂಗ್ ವ್ಯಕ್ತಿ ವಿಕಾಸ ಕೇಂದ್ರದಲ್ಲಿ ಆ.17 ಮತ್ತು 18 ರಂದು ಜೀವನ ಕಲೆ ಶಿಬಿರದ ಅಂಗವಾಗಿ ನಾಡಿ ಪರೀಕ್ಷೆ ನಡೆಯಲಿದ್ದು, ಆಸಕ್ತರು ಮೊ. 98459 63387 ಸಂಪರ್ಕಿಸಬಹುದು.
ವಾರ್ಷಿಕೋತ್ಸವ
ಸಂಭ್ರಮ ಚಿಟ್ಸ್ ಮತ್ತು ಸಂಪದ ಫೈನಾನ್ಸ್ ಕಾರ್ಪೋರೇಷನ್ನ 21ನೇ ಸಂಭ್ರಮೋತ್ಸವವು ಆ.25ರ ಬೆಳಗ್ಗೆ 10.30ಕ್ಕೆ ಜಗನ್ಮೋಹನ ಅರಮನೆಯಲ್ಲಿ ನಡೆಯಲಿದ್ದು, ನಿವೃತ್ತ ವೈದ್ಯ ಡಾ.ಎಂ. ಬಸವರಾಜು, ಕಲಾವಿದೆ ಎಂ.ಎಸ್. ಗೀತಾ, ಎಂ. ಮುರಳೀಧರ ಭಾಗವಹಿಸುವರು.
ರಸಪ್ರಶ್ನೆ ಸ್ಪರ್ಧೆ
ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಡಿ. ಬನುಮಯ್ಯ ಬಾಲಕರ ಪ್ರೌಢಶಾಲೆ ಸಂಯುಕ್ತವಾಗಿ ಆ.30ರ ಬೆಳಗ್ಗೆ 10.30ಕ್ಕೆ ನಗರ ಮಟ್ಟದ ಅಂತರ ಪ್ರೌಢಶಾಲಾ ಕನ್ನಡ ರಸಪ್ರಶ್ನೆ ಸ್ಪರ್ಧೆ ಆಯೋಜಿಸಿವೆ. ಬೆಳಗ್ಗೆ ಲಿಖಿತ ಪರೀಕ್ಷೆ, ಮಧ್ಯಾಹ್ನ ಮೌಖಿಕ ಪರೀಕ್ಷೆ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ ಮೊ. 94818 15889 ಸಂಪರ್ಕಿಸಿ.
ಬಿಜೆಪಿಗೆ ನೇಮಕ
ನಗರ ಬಿಜೆಪಿ ನರಸಿಂಹರಾಜ ಕ್ಷೇತ್ರ ಉಪಾಧ್ಯಕ್ಷರಾಗಿ ಲಕ್ಷ್ಮಣ್, ನಾರಾಯಣ್, ಮುರುಗೇಶ್, ಪೂರ್ಣಿಮಾ, ಸಾಯಿಲತಾ ಆನಂದ್, ಕಾರ್ಯದರ್ಶಿಗಳಾಗಿ ಮಂಜು ಸಿ. ಗೌಡ, ಬ.ಜ. ಶ್ರೀಕಂಠ, ಮಹಾಲಕ್ಷ್ಮೀ, ಶಿವಾನಂದರಾವ್, ಬಿ. ಪದ್ಮನಾಭ, ಅನಿತ, ಕೋಶಾಧ್ಯಕ್ಷರಾಗಿ ನಾಗೇಶ್ ಅವರನ್ನು ನೇಮಿಸಲಾಗಿದೆ ಎಂದು ಕ್ಷೇತ್ರದ ಅಧ್ಯಕ್ಷ ಬಿ. ಆನಂದ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments