ಆಕಸ್ಮಿಕ ಬೆಂಕಿ ತಗುಲಿ ಮಹಿಳೆ ಸಾವು
ಮೈಸೂರು: ಸೀಮೆಎಣ್ಣೆ ಒಲೆ ಹಚ್ಚುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿ ತೀವ್ರ ಸುಟ್ಟ ಗಾಯಗಳೊಂದಿಗೆ ಕೆ.ಆರ್. ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಸೋಮವಾರ ಮೃತಪಟ್ಟಿದ್ದಾರೆ. ನಗರದ ಹೊರವಲಯದಲ್ಲಿರುವ ಹಿನಕಲ್ ನಿವಾಸಿ ರವಿಕುಮಾರ್ ಎಂಬವರ ಪತ್ನಿ ಅಶ್ವಿನಿ (21) ಮೃತಪಟ್ಟವರು. ಇವರಿಗೆ ಒಬ್ಬ ಪುತ್ರ ಇದ್ದಾನೆ. ಭಾನುವಾರ ಒಲೆ ಹಚ್ಚುವಾಗಿ ತೀವ್ರ ಸುಟ್ಟಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು. ತಹಸೀಲ್ದಾರ್ ಮಹಜರು ಮಾಡಿದ್ದಾರೆ. ಈ ಸಂಬಂಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.