ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಖಾತೆ ಮಾಡಿಕೊಡಲು ತಹಸೀಲ್ದಾರ್ ವಿಳಂಬ

Rashmi Kasaragodu
Updated On : 12 Aug 2013, 11:33 am

ಕ.ಪ್ರ.ವಾರ್ತೆ     ಮೈಸೂರು     ಆ. 12
ಟಿ. ನರಸೀಪುರದ ತಹಸೀಲ್ದಾರ್ ಜಮೀನಿನ ಖಾತೆ ಮಾಡಿಕೊಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ತಾಲೂಕು ಗಾಣಿಗರ ಸಂಘದ ಕಾರ್ಯದರ್ಶಿ ಮಹದೇವಸ್ವಾಮಿ ಆರೋಪಿಸಿದರು.
ಮೂಗೂರಿನಲ್ಲಿರುವ ಸರ್ವೆ ನಂ.559 ರಲ್ಲಿ 2.16 ಗುಂಟೆ ಜಮೀನು ದಿವಂಗತ ಸಿದ್ದಶೆಟ್ಟಿ ಎಂಬವರಿಗೆ ಸೇರಿದ್ದು, ಅವರು ನಿಧನರಾದ ನಂತರ ಉಂಟಾದ ವಿವಾದದಿಂದಾಗಿ ಈ ಜಮೀನಿನ ವ್ಯಾಜ್ಯವು ಹೈಕೋರ್ಟ್ ಮೆಟ್ಟಿಲೇರಿತ್ತು ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಿದ್ದಶೆಟ್ಟಿ ಅವರು ನಮ್ಮ ಮಾವ, ಅವರ ಜಮೀನು ನನಗೆ ಸೇರಬೇಕು ಎಂದು ಹೇಳಿಕೊಂಡು ಚಿನ್ನಮ್ಮ ಎಂಬವರು ಹೈಕೋರ್ಟ್ನಲ್ಲಿ ದಾವೆ ಹೂಡಿದ್ದರು. ಮೊಕದ್ದಮೆ ವಿಚಾರಣೆ ನಂತರ ಮಹದೇವಮ್ಮ ಅವರ ಪರ ತೀರ್ಪು ನೀಡಿ ಅವರಿಗೆ ಖಾತೆ ಮಾಡಿಕೊಡುವಂತೆ ನ್ಯಾಯಾಲಯ ಆದೇಶ ಹೊರಡಿಸಿ ಮೂರು ತಿಂಗಳಾಗಿದ್ದರೂ ಈವರೆಗೆ ಸಂಬಂಧಿಸಿದ ಅಧಿಕಾರಿಗಳು ಮುಂದಾಗಿಲ್ಲ ಎಂದು ಅವರು ದೂರಿದರು.ಈ ಸಂಬಂಧ ಮೈಸೂರು ಜಿಲ್ಲಾಧಿಕಾರಿಗಳು ಸಹ ಜು.27 ರಂದು ಟಿ. ನರಸೀಪುರದ ತಹಸೀಲ್ದಾರ್ಗೆ ಪತ್ರ ಬರೆದು, ಮಹದೇವಮ್ಮ ಮತ್ತು ವೆಂಕಟಮ್ಮ ಅವರಿಗೆ ಖಾತೆ ಮಾಡಿಕೊಡುವಂತೆ ಸೂಚಿಸಿದೆ. ಹೀಗಿದ್ದರೂ ವಿನಾ ಕಾರಣ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಆದ್ದರಿಂದ ಕೂಡಲೇ ಖಾತೆ ಮಾಡಿಕೊಡುವಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಮಹದೇವಮ್ಮ, ವೆಂಕಟಮ್ಮ, ನಿಂಗರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement