ಚಿನ್ನಾಭರಣ ದೋಚಿದ್ದ ಆರೋಪಿ ಸೆರೆ
ಮೈಸೂರು: ನಿವೇಶನ ತೋರಿಸುವುದಾಗಿ ವ್ಯಕ್ತಿಯೊಬ್ಬರನ್ನು ಕರೆದುಕೊಂಡು ಹೋಗಿ ಚಾಕು ತೋರಿಸಿ ಚಿನ್ನದ ಸರ, ಮೊಬೈಲ್ ದೋಚಿದ್ದ ಆರೋಪಿಯನ್ನು ಕುವೆಂಪುನಗರ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ವಿದ್ಯಾರಣ್ಯಪುರಂ ನಿವಾಸಿ ರಾಮಕೃಷ್ಣ ಅ. ಸೌತ್ ಸ್ವಾಮಿ (50) ಬಂಧಿತ ಆರೋಪಿ. ಮಹದೇವಪುರ ನಿವಾಸಿ ಹಾಗೂ ಎಂಜಿನಿಯರ್ ಪ್ರದೀಪ್ ಎಂಬವರನ್ನು ನಿವೇಶನ ತೋರಿಸುವುದಾಗಿ ರಾಮಕೃಷ್ಣ ಜು.31 ರಂದು ಕರೆದುಕೊಂಡು ಹೋಗಿದ್ದಾರೆ. ವರ್ತುಲ ರಸ್ತೆಯ ಬಳಿಯಿರುವ ಬೃಂದಾವನ ಬಡಾವಣೆಗೆ ಕರೆದುಕೊಂಡು ಹೋಗಿ ಚಾಕು ತೋರಿಸಿ 12 ಗ್ರಾಂ. ಚಿನ್ನದ ಸರ, 1 ಮೊಬೈಲ್ ದೋಚಿ ಪರಾರಿಯಾಗಿದ್ದ.
ಬೈಕ್ ಸವಾರ ಸಾವು
ಶಾಲಾ ವಾಹನ ಡಿಕ್ಕಿಯಾಗಿ ಬೈಕ್ ಸವಾರನೊಬ್ಬ ಮೃತಪಟ್ಟಿರುವ ಘಟನೆ ನಂಜನಗೂಡು ರಸ್ತೆಯಲ್ಲಿ ಭಾನುವಾರ ನಡೆದಿದೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು ತೆರಕಣಾಂಬಿಹುಂಡಿ ನಿವಾಸಿ ನಾಗೇಗೌಡ ಎಂಬವರ ಪುತ್ರ ಎನ್. ವೆಂಕಟೇಶ್ (24) ಮೃತಪಟ್ಟವರು. ಈ ಸಂಬಂಧ ಕೆ.ಆರ್. ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.