ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪ್ರತಿಭಟನೆ ರದ್ದು

Rashmi Kasaragodu
Updated On : 12 Aug 2013, 11:34 am

ಮೈಸೂರು: ನಗರಪಾಲಿಕೆ ವಾರ್ಡ್ ನಂ.43 ಮತ್ತು 44ರಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡಲು ಆಗ್ರಹಿಸಿ ಕರ್ನಾಟಕ ಜನಪರ ಶಕ್ತಿ ವೇದಿಕೆಯವರು ಸೋಮವಾರ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯು ರದ್ದಾಯಿತು. ಬನ್ನಿಮಂಟಪದಲ್ಲಿ ಪ್ರತಿಭಟನೆ ನಡೆಸಲು ಪೊಲೀಸರು ಅನುಮತಿ ನೀಡದ ಹಿನ್ನೆಲೆಯಲ್ಲಿ ಪ್ರತಿಭಟನೆ ರದ್ದುಗೊಳಿಸಿರುವುದಾಗಿ ವೇದಿಕೆಯ ರಾಜ್ಯಾಧ್ಯಕ್ಷೆ ಆರ್. ಮಧುಮತಿ ತಿಳಿಸಿದ್ದಾರೆ.
ಇಂದು ಕಾವಾದಲ್ಲಿ ಕಲಾ ಪ್ರದರ್ಶನ
ಮೈಸೂರು: ಕಲಾವಿದ ಪ್ರೊ.ಎಂ.ಎಸ್. ನಂಜುಂಡರಾವ್ ಕುರಿತಾದ ಚಿತ್ರಕಲಾ ಪ್ರದರ್ಶನವನ್ನು ನಗರದ ಸಯ್ಯಾಜಿರಾವ್ ರಸ್ತೆಯ ಕಾವಾದ ಆರ್ಟ್ ಗ್ಯಾಲರಿಯಲ್ಲಿ ಆ.13 ರಂದು ಏರ್ಪಡಿಸಲಾಗಿದೆ. ಪ್ರೊ.ಎಂ.ಎಸ್. ನಂಜುಂಡರಾವ್ ಮೆಮೋರಿಯಲ್ ಚಾರಿಟಬಲ್ ಟ್ರಸ್ಟ್ ಹಾಗೂ ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿ (ಕಾವಾ) ಸಂಯುಕಾಶ್ರಯದಲ್ಲಿ ನಂ. ನಾಗಲಕ್ಷ್ಮಿ ಅವರು ರಚಿಸಿರುವ ಪ್ರೊ.ಎಂ.ಎಸ್. ನಂಜುಂಡರಾವ್ ಜೀವನ ಚರಿತ್ರೆ ಕುರಿತಾದ ಅನನ್ಯ ಕಲಾಸಾರಥಿ ನಂಜುಂಡರಾವ್ ಕಲಾ ಪ್ರದರ್ಶನವನ್ನು ಏರ್ಪಡಿಸಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಎಸ್.ಎನ್. ರವಿಶಂಕರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು. ಸಂಜೆ 4ಕ್ಕೆ ರಾಮಸನ್ಸ್ ಕಲಾ ಪ್ರತಿಷ್ಠಾನ ಕಾರ್ಯನಿರ್ವಾಹಕ ಟ್ರಸ್ಟ್ ಎಂ.ಬಿ. ಸಿಂಗ್ ಉದ್ಘಾಟಿಸುವರು. ಕಾರ್ಯದರ್ಶಿ ಆರ್.ಜಿ. ಸಿಂಗ್ ಹಾಗೂ ಕಲಾವಿದರಾದ ಗಂಜೀಫ ರಘುಪತಿ ಭಟ್ ಹಾಗೂ ನಂ. ನಾಗಲಕ್ಷ್ಮಿ ಭಾಗವಹಿಸುವರು ಎಂದರು. ಕಾವಾ ಡೀನ್ ಎ.ವಿ. ದೇಶಪಾಂಡೆ ಹಾಗೂ ಟ್ರಸ್ಟ್ ಅಧ್ಯಕ್ಷ ಎಂ.ಎಸ್. ಲಕ್ಷ್ಮೀಶ ಇದ್ದರು.
ಮರಗಳನ್ನು ಉಳಿಸಿ: ತಮ್ಮಯ್ಯ
ಮೈಸೂರು: ನಗರದ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಮರಗಳು ಬೆಳೆದು ನಿಂತಿವೆ. ದುರ್ದೈವ ಎಂದರೆ ಕೆಲವರು ಮರದ ಚೆಕ್ಕೆಗಳನ್ನು ತೆಗೆದು ಒಣಗುವಂತೆ ಮಾಡುತ್ತಿದ್ದಾರೆ ಎಂದು ಅರಣ್ಯ ಇಲಾಖೆಯ ನಿವೃತ್ತ ನೌಕರ ತಮ್ಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ. ಸರಸ್ವತಿಪುರಂ 1ನೇ ತಿರುವಿನಲ್ಲಿರುವ ಮರಗಳಿಗೆ ಈ ದುರ್ಗತಿ ಬಂದಿದೆ. ಹಾಗೆ ಅಶೋಕ ವೃತ್ತದ ತಿರುವಿನಲ್ಲಿ ಮರಗಳಿದ್ದು, ಇವು ಸಾರ್ವಜನಿಕರಿಗೆ ತೊಂದರೆ ನೀಡುತ್ತಿವೆ. ಸಂಬಂಧಪಟ್ಟ ಇಲಾಖೆಯವರು ಕೂಡಲೇ ಮರಗಳನ್ನು ತೆಗೆಸಿ ಅದರ ಪಕ್ಕದಲ್ಲಿ ಮಹಾಗನಿ ಗಿಡಗಳನ್ನು, ಹೊಂಗೆ ಗಿಡಗಳನ್ನು ನೆಡಸಿ ಹಳೆಯ ಮರಗಳ ರಂಬೆಗಳನ್ನು ಕತ್ತರಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement