ಬಸ್ ಡಿಕ್ಕಿ: ಇಬ್ಬರ ಸಾವು
ಬೈಲುಕುಪ್ಪೆ: ಸರ್ಕಾರಿ ಸಾರಿಗೆ ಬಸ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಸ್ಥಳದಲ್ಲೆ ಇಬ್ಬರು ಮೃತಪಟ್ಟ ಘಟನೆ ಇಲ್ಲಿನ ಹಳೆಯೂರಿನ ಬಿ.ಎಂ. ರಸ್ತೆಯಲ್ಲಿ ಭಾನುವಾರ ರಾತ್ರಿ ಜರುಗಿದೆ. ಇಲ್ಲಿನ 10ನೇ ಕ್ಯಾಂಪಿನ ಟಿಬೆಟಿಯನ್ ನಿವಾಸಿಗಳಾದ ಯತಿನ್ (23), ನಿಮಟಸ್ಸಿ (29) ಮೃತಪಟ್ಟ ದುರ್ದೈವಿಗಳು. ಸ್ಥಳಕ್ಕೆ ಸರ್ಕಲ್ ಇನ್ಸ್ಪೆಕ್ಟರ್ ಪಿ.ವಿ. ವೆಂಕಟೇಶ್ ಭೇಟಿ ನೀಡಿದ್ದರು.