ಎನ್ಸಿಸಿಯಿಂದ ನಾಯಕತ್ವ ಗುಣ
ಕ.ಪ್ರ.ವಾರ್ತೆ ಮೈಸೂರು ಆ. 13
ಎನ್ಸಿಸಿ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುತ್ತದೆ, ಇತ್ಯಾತ್ಮಕ ಮೌಲ್ಯ ಪ್ರೆರೇಪಿಸುತ್ತದೆ ಮತ್ತು ಅವರನ್ನು ದೇಶದ ಸತ್ಪ್ರಜೆಗಳನ್ನಾಗಿ ರೂಪಿಸುತ್ತದೆ ಎಂದು 13 ಕರ್ನಾಟಕ ಬೆಟಾಲಿಯನ್ನ ಕಮಾಂಡಿಂಗ್ ಅಧಿಕಾರಿ ಕರ್ನಲ್ ಅಜಯ್ ಟೋಮರ್ ಅಭಿಪ್ರಾಯಪಟ್ಟರು.
ಶಾರದಾವಿಲಾಸ ಕಾಲೇಜಿನಲ್ಲಿ ಹೊಸದಾಗಿ ಎನ್ಸಿಸಿಗೆ ಸೇರ್ಪಡೆಯಾದ ಕೆಡೆಟ್ಗಳನ್ನು ಉದ್ದೇಶಿಸಿ ಮಾತನಾಡಿ, ಎನ್ಸಿಸಿ ವಿದ್ಯಾರ್ಥಿಗಳಲ್ಲಿ ಪ್ರಾಮಾಣಿಕತೆ, ಶಿಸ್ತು, ದೇಶಪ್ರೇಮ ಮುಂತಾದ ಮೌಲ್ಯ ಬೆಳೆಸಿ ಉತ್ತಮ ಸಮಾಜದ ನಿರ್ಮಾಣ ಮಾಡುತ್ತದೆ ಎಂದರು.
ಪ್ರಾಂಶುಪಾಲ ಡಾ.ಎ.ಆರ್. ನಾಗಭೂಷಣ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಕ್ರಿಯಾಶೀಲ ಕೆಡೆಟ್ಗಳಾಗಿದ್ದು, ಆತ್ಮವಿಶ್ವಾಸ ರೂಢಿಸಿಕೊಂಡು ಯಶಸ್ವಿಯಾಗಬೇಕು, ಎನ್ಸಿಸಿ ವಿದ್ಯಾರ್ಥಿಗಳನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಶಕ್ತರನ್ನಾಗಿಸುತ್ತದೆ ಎಂದರು. ಲೆಫ್ಟಿನೆಂಟ್ ಆರ್.ಎ. ಮಂಜುನಾಥ್ ಮತ್ತು ಕೆಡೆಟ್ಗಳು ಇದ್ದರು. ಕೌಂಡಿನ್ಯ ಸ್ವಾಗತಿಸಿದರು. ಕೆ.ಎಂ. ಸಚಿನ್ ವಂದಿಸಿದರು. ಎಂ. ನವೀನ್ ನಿರೂಪಿಸಿದರು.