ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕ್ರಿಕೆಟ್: ಅಮೃತ ವಿದ್ಯಾಲಯಕ್ಕೆ ಜಯ

Rashmi Kasaragodu
Updated On : 14 Aug 2013, 12:19 pm

ಕ.ಪ್ರ.ವಾರ್ತೆ    ಮೈಸೂರು    ಆ. 13
ಕೆಎಸ್ಸಿಎ ಮೈಸೂರು ವಲಯ ಗಂಗೋತ್ರಿ ಗ್ಲೇಡ್ಸ್ ಮೈದಾನದಲ್ಲಿ ಏರ್ಪಡಿಸಿದ್ದ 16 ವರ್ಷದೊಳಗಿನವರ ಅಂತರ ಶಾಲಾ ಕ್ರಿಕೆಟ್ನ ಅಂತಿಮ ಪಂದ್ಯಾವಳಿಯಲ್ಲಿ ನಗರದ ಅಮೃತ ವಿದ್ಯಾಲಯ ತಂಡಜಯಗಳಿಸಿದೆ.
ತಂಡದ ಎಸ್. ಅಭಿಲಾಷ್ ಮತ್ತು ಆರ್. ಭರತ್ ಅವರು ಆರನೆ ವಿಕೆಟ್ಗೆ ಸೇರಿದ 43 ರನ್ಗಳ ಜೊತೆಯಾಟ ತಂಡದ ಗೆಲವಿಗೆ ಕಾರಣವಾಯಿತು.
ಅಂತೆಯೆ ಪವನ್ ನಂದ, ಸಿ. ವಿಜ್ಞೇಶ್ ಕುಮಾರ್ ಅವರ ವಿಕೆಟ್ ಕಬಳಿಕೆಯನ್ನು ಮರೆಯುವಂತಿಲ್ಲ.
ಮೊದಲು ಬ್ಯಾಟ್ ಮಾಡಿದ ಅಮೃತ ವಿದ್ಯಾಲಯವು 25 ಓವರ್ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು 90 ರನ್ ಕಲೆಹಾಕಿತು. ತಂಡದ ಪರ ಎಸ್.ಅಭಿಲಾಷ್ (28) ಹೊರತುಪಡಿಸಿ ಉಳಿದವರು ಹೆಚ್ಚು ರನ್ ಗಳಿಸಲಿಲ್ಲ.
ಈ ಹಂತದಲ್ಲಿ ಆಂತಕ ಸೃಷ್ಟಿಯಾಗಿತ್ತು. ಇದಕ್ಕೆ ಪ್ರತಿಯಾಗಿ ಮಹಾಬೋಧಿ ಶಾಲೆಯು 27.2 ಓವರ್ಗೆ ಕೇವಲ 63 ರನ್ ಮಾತ್ರ ಕಲೆಹಾಕಿ ಸೋಲೊಪ್ಪಿಕೊಂಡಿತು.
ಎ. ಅಭಿಲಾಷ್ಗೆ ಮ್ಯಾನ್ ಆಫ್ ದಿ ಮ್ಯಾಚ್ ನೀಡಿ ಅಭಿನಂದಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement