ತಂಬಾಕು ಬ್ಯಾರನ್ಗೆ ಬೆಂಕಿ: ಲಕ್ಷಾಂತರ ಹಾನಿ
ಹುಣಸೂರು: ತಂಬಾಕು ಹದಗೊಳಿಸುತ್ತಿದ್ದ ಎರಡು ಬ್ಯಾರನ್ಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಹಾನಿಯಾಗಿರುವ ಘಟನೆ ಹನಗೋಡಿನ ಗೌಡಿಕೆರೆಯಲ್ಲಿ ಜರುಗಿದೆ. ತಾಲೂಕಿನ ಗೌಡಿಕೆರೆ ಗ್ರಾಮದ ನಿವಾಸಿ ಇಸ್ಮಾಯಿಲ್ ಖಾನ್ ಅವರಿಗೆ ಸೇರಿದ 2 ಬ್ಯಾರನ್ಗಳು ಅಕ್ಕಪಕ್ಕದಲ್ಲಿಯೆ ಇದ್ದವು. ಮೊದಲು ಒಂದು ಬ್ಯಾರನ್ಗೆ ಸೋಮವಾರ ರಾತ್ರಿ 10 ಗಂಟೆ ಸುಮಾರಿನಲ್ಲಿ ಬೆಂಕಿ ತಗುಲಿದೆ. ಬೆಂಕಿಯ ಜ್ವಾಲೆ ಪಕ್ಕದಲ್ಲೆ ಇದ್ದ ಮತ್ತೊಂದು ಬ್ಯಾರನ್ಗೆ ಹರಡಿ ಎರಡೂ ಬ್ಯಾರನ್ಗಳು ಸಂಪೂರ್ಣ ಆಹುತಿಯಾಗಿದ್ದು, ಸುಮಾರು 2 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ