ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಧರ್ಮಗಳ ಸಂಘರ್ಷ ಶಾಂತಿಗೆ ಧಕ್ಕೆ: ಡೆರ್ಲಾ

Rashmi Kasaragodu
Updated On : 14 Aug 2013, 12:19 pm

ಕ.ಪ್ರ.ವಾರ್ತೆ    ಮೈಸೂರು    ಆ. 13
ಇಂದು ಧರ್ಮಗಳ ನಡುವೆ ನಡೆದಿರುವ ಸಂಘರ್ಷದಿಂದಾಗಿ ಶಾಂತಿಗೆ ಧಕ್ಕೆ ಉಂಟಾಗಿದೆ ಎಂದು ಅಮೆರಿಕದ ಜಾರ್ಜ್ ಮಾಸನ್ ವಿವಿಯ ಸಾಂಸ್ಕೃತಿಕ ಮಾನವಶಾಸ್ತ್ರಜ್ಞ ಡೆರ್ಲಾ ಮೊಘಾದಸಿ ಹೇಳಿದರು.
ಮಹಾಜನ ಪ್ರಥಮ ದರ್ಜೆ ಕಾಲೇಜಿನ ಶಾಂತಿ ಮತ್ತು ಸೌಹಾರ್ದ ವೇದಿಕೆಯು ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಶಾಂತಿ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದರು.
ಯಾವುದೇ ಧರ್ಮಕ್ಕೆ ಒಟ್ಟುಗೂಡಿಸುವ ಶಕ್ತಿಯಿದೆ. ಧರ್ಮದ ಮೂಲ ಆಶಯ ಶಾಂತಿ ಮತ್ತು ಐಕ್ಯತೆ ಸ್ಥಾಪಿಸುವುದು. ಆದರೆ ಇತ್ತೀಚೆಗೆ ಜಗತ್ತಿನಲ್ಲಿ ಹೆಚ್ಚಾಗಿ ನಡೆದಿರುವ ಧರ್ಮಗಳ ಸಂಘರ್ಷದಿಂದ ಸಮಾಜದ ಶಾಂತಿ ಕದಡಿದೆ ಎಂದು ವಿಷಾದಿಸಿರು.
ಧರ್ಮಗಳ ನಡುವೆ ನಡೆಯುವ ಸಂಘರ್ಷವನ್ನು ಹೋಗಲಾಡಿಸಬೇಕಾದರೆ ಅದಕ್ಕೆ ಜಾಣ್ಮೆಯಾಗಲಿ ಅಥವಾ ತಾಳ್ಮೆಯಾಗಲಿ ಅವಶ್ಯಕವಲ್ಲ. ಬದಲಾಗಿ ಎಲ್ಲಾ ಧರ್ಮಗಳ ಸಾರವೂ ಒಂದೇ ಎಂದು ಅದನ್ನು ಪ್ರೀತಿಸುವ ಮನೋಭಾವ ಹೊಂದುವುದು ಬಹುಮುಖ್ಯ. ಶಾಂತಿ ಸಂದೇಶ ಸಾರಲು ಇಂದು ಸಾಕಷ್ಟು ಅವಕಾಶವಿದೆ. ಈ ಕಾರ್ಯವನ್ನು ಮಾಡುವ ಮೂಲಕ ನಾವು ಶಾಂತಿ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಧಾರ್ಮಿಕ ಚಿಂತಕಿ ದೀಪಿಕಾ ಮಾಧವ್ ಮಾತನಾಡಿ, ಧಾರ್ಮಿಕ ಚಿಂತನೆ ಹಾಗೂ ಶಾಂತಿ ವ್ಯವಸ್ಥೆಯಿಂದ ಯುವಜನತೆಯಲ್ಲಿ ಶಕ್ತಿ ತುಂಬಲು ಸಾಧ್ಯ. ಅವರಲ್ಲಿರುವ ಸಾಮರ್ಥ್ಯವನ್ನು ಆ ಮೂಲಕ ತಿಳಿಸಿಕೊಡುವ ಅಗತ್ಯವಿದೆ ಎಂದರು.
ಇರಾನ್ ದೇಶದ ಸಂಶೋಧನಾ ತಜ್ಞೆ ನಹಿದಾ ಬಹುಮಾನ ವಿತರಿಸಿದರು. ಪ್ರಾಂಶುಪಾಲ ಪ್ರೊ.ಕೆ.ವಿ. ಪ್ರಭಾಕರ, ಸಮ್ಮೇಳನದ ಸಂಚಾಲಕಿ ಎಂ.ಆರ್. ಇಂದ್ರಾಣಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement