ಪ್ರಗತಿಬಂಧು ಸಂಘದ ಪದಾಧಿಕಾರಿಗಳ ಆಯ್ಕೆ
ಕ.ಪ್ರ.ವಾರ್ತೆ ಟಿ.ನರಸೀಪುರ ಆ. 13
ಸ್ತ್ರೀಶಕ್ತಿ ಸಂಘಟನೆಯನ್ನು ಗ್ರಾಮೀಣಾಭಿವೃದ್ಧಿಗೆ ಬಳಕೆ ಮಾಡಿಕೊಳ್ಳಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಹಿಸುತ್ತಿದೆ ಎಂದು ಯೋಜನಾಧಿಕಾರಿ ಪಿ. ಮೋಹನ್ ನಾಯಕ್ ಹೇಳಿದರು.
ತಾಲೂಕಿನ ಚಿದರಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ನಡೆದ ದೊಡ್ಡೆಬಾಗಿಲು ವಲಯದ ಚಿದರಹಳ್ಳಿ, ಕೆಂಪನಪುರ, ನಾಗಲಗೆರೆ ಮತ್ತು ಕೊಳತೂರು ಗ್ರಾಮಗಳ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣ ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿಗೆ ದುಡಿಯುತ್ತಿದೆಯೇ ಹೊರತು ಜನರನ್ನು ಸಾಲಗಾರರನ್ನಾಗಿ ಮಾಡುವುದಕ್ಕಲ್ಲ ಎಂದು ತಿಳಿಸಿದರು.
ತಾಪಂ ಸದಸ್ಯ ನಟರಾಜು ಕಾರ್ಯಕ್ರಮ ಉದ್ಘಾಟಿಸಿದರು. ಇದೆ ವೇಳೆ ವಿವಿಧ ಗ್ರಾಮಗಳಲ್ಲಿ ಪ್ರಗತಿಬಂಧು ಒಕ್ಕೂಟವನ್ನು ರಚನೆ ಮಾಡಿ, ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಿ, ಸಂಘ ನಿರ್ವಹಣೆಗೆ ಅಗತ್ಯವಿರುವ ದಾಖಲೆ ಪುಸ್ತಕಗಳನ್ನು ನೀಡಲಾಯಿತು. ಗ್ರಾಪಂ ಅಧ್ಯಕ್ಷ ಎಸ್. ಸಿದ್ದು ಅಧ್ಯಕ್ಷತೆ ವಹಿಸಿದ್ದರು. ಕೊಳತೂರು ಗ್ರಾಪಂ ಅಧ್ಯಕ್ಷೆ ಮಹದೇವಮ್ಮ, ಪತ್ರಕರ್ತ ಎಂ. ಮಹದೇವ್, ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಬದರಿಪ್ರಸಾದ್, ಮೇಲ್ವಿಚಾರಕರಾದ ಸಂದೇಶ್, ಯೋಗೇಶ್, ಒಕ್ಕೂಟಗಳ ಅಧ್ಯಕ್ಷರಾದ ಧನಲಕ್ಷ್ಮೀ, ಮಾಲಮ್ಮ, ಸುನಂದ, ಸುಧಾ, ಸೇವಾ ಪ್ರತಿನಿಧಿಗಳಾದ ಕೋಮಲ, ಪ್ರೇಮಕುಮಾರಿ, ಯಶೋಧ, ಸವಿತಾ ಇದ್ದರು.