ಮಹಿಳೆ ಸೇರಿ ಇಬ್ಬರು ನಾಪತ್ತೆ
ಕ.ಪ್ರ.ವಾರ್ತೆ ಮೈಸೂರು ಆ. 13
ಸತ್ಯನಗರ ನಿವಾಸಿ ಸೈಯದ್ ಕಲೀಲ್ ಅಹಮ್ಮದ್ ಎಂಬವರ ಪತ್ನಿ ಸೈಯದ್ ಯಾಸ್ಮಿನ್ (22) ರಂಜಾನ್ ಹಬ್ಬದಂದು ನಾಪತ್ತೆಯಾಗಿದ್ದಾರೆ. ರಂಜಾನ್ ಹಬ್ಬಕ್ಕೆ ಖರೀದಿಸಿದ್ದ ಬಟ್ಟೆ ಸರಿಯಿಲ್ಲ ಎಂದು ಯಾಸ್ಮೀನ್ ಕೋಪಿಸಿಕೊಂಡಿದ್ದಳು. ಬದಲಿ ಬಟ್ಟೆ ತೆಗೆದುಕೊಂಡು ಬರುವಷ್ಟರಲ್ಲಿ ಯಾಸ್ಮಿನ್ ಕಾಣೆಯಾಗಿದ್ದಾರೆ ಎಂದು ಕಲೀಲ್ ಅಹಮದ್ ಉದಯಗಿರಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಚಹರೆ- 5.2 ಅಡಿ ಎತ್ತರ, ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು, ದುಂಡು ಮುಖ, ಉರ್ದು ಮತ್ತು ಕನ್ನಡ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಮೊ. 9740136422 ಸಂಪರ್ಕಿಸಬಹುದು.
ವ್ಯಕ್ತಿ ನಾಪತ್ತೆ: ಉದಯಗಿರಿ ಠಾಣೆ ವ್ಯಾಪ್ತಿಯ ನಿವಾಸಿ ರಾಜು (42) ಎಂಬವರು ನಾಪತ್ತೆಯಾಗಿದ್ದಾರೆ. ಇವರ ದ್ವಿಚಕ್ರವಾಹನವು ನಂಜನಗೂಡು ದೇವಸ್ಥಾನದ ಬಳಿ ಪತ್ತೆಯಾಗಿದೆ. ಚಹರೆ- 5.3 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು, ಕನ್ನಡ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418309 ಸಂಪರ್ಕಿಸಬಹುದು